ಕನ್ನಡ ವಾರ್ತೆಗಳು

ನ್ಯಾಷನಲ್ ಜಿಯೋಗ್ರಫಿ ಚಾನೆಲ್ ಮೂಲಕ ಜಗತ್ತಿಗೆ ಪರಿಚಯವಾಗಲಿದೆ ಶ್ರೀಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಪಾಕಶಾಲೆ

Pinterest LinkedIn Tumblr

Dharmasthal_Kitchen_1

ಮಂಗಳೂರು,ಜೂನ್.22: ನ್ಯಾಷನಲ್ ಜಿಯೋಗ್ರಫಿ ಚಾನೆಲ್ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಪಾಕಶಾಲೆ ಜಗತ್ತಿಗೆ ಪರಿಚಯವಾಗಲಿದೆ. ಆ ಚಾನೆಲ್ ನಲ್ಲಿ ಆರಂಭವಾಗುವ ಮೆಗಾ ಕಿಚನ್ ಸರಣಿಯಲ್ಲಿ ಧರ್ಮಸ್ಥಳದ ಪಾಕಶಾಲೆ ಮೂಡಿ ಬರಲಿದೆ.

ಈ ಮಾಲಿಕೆಯಲ್ಲಿ ಧರ್ಮಸ್ಥಳ, ಅಕ್ಷಯಪಾತ್ರ ಹುಬ್ಬಳ್ಳಿ, ಶಿರಡಿ ಮಹಾರಾಷ್ಟ್ರ, ದೆಹಲಿ ತಾಜ್ ಹಾಗೂ ಐಆರ್ಟಿಸಿ ಕಿಚನ್ ನೋಯ್ಡಾ ಪ್ರಸಾರವಾಗಲಿರುವ ದೇಶದ ಅತೀ ದೊಡ್ಡ ಪಾಕಶಾಲೆಗಳಾಗಿವೆ.

ಧರ್ಮಸ್ಥಳದಲ್ಲಿ ಪ್ರತೀ ದಿನ ಸರಾಸರಿ 50 ಸಾವಿರದಿಂದ ಒಂದು ಲಕ್ಷ ಜನರಿಗೆ ಭೋಜನ ವ್ಯವಸ್ಥೆಯನ್ನು ಅನ್ನಪೂರ್ಣದಲ್ಲಿ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಪ್ರತೀ ಸೋಮವಾರ ಮತ್ತು ಮಂಗಳವಾರ ರಾತ್ರಿ 10 ಗಂಟೆಯಿಂದ ಪ್ರಸಾರವಾಗಲಿದೆ.

Write A Comment