ಅಂತರಾಷ್ಟ್ರೀಯ

ಯೋಗ ದಾಖಲೆ ಈ ವರ್ಷ ಗಿನ್ನಿಸ್ ಪುಸ್ತಕಕ್ಕೆ ಇಲ್ಲ

Pinterest LinkedIn Tumblr

Yoga_June 21_2015-006

ನವದೆಹಲಿ, ಜೂ. ೨೨- ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ರಾಜ್‌ಪಥ್‌ನಲ್ಲಿ ನಡೆದ ಯೋಗ ಕಾರ್ಯಕ್ರಮ ಎರಡು ವಿಶ್ವ ದಾಖಲೆ ನಿರ್ಮಿಸಿದರೂ ಈ ವರ್ಷದ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಈ ದಾಖಲೆ ಮುದ್ರಣ ಆಗುವುದಿಲ್ಲ. ಬದಲಾಗಿ 2016ರ ಗಿನ್ನಿಸ್ ವಿಶ್ವ ದಾಖಲೆಯ ಪುಸ್ತಕದಲ್ಲಿ ಮುದ್ರಣವಾಗಲಿದೆ.

ರಾಜ್‌ಪಥ್‌ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ 35,985 ಮಂದಿ ಯೋಗ ಮಾಡುವ ಮೂಲಕ ಒಂದು ದಾಖಲೆ ನಿರ್ಮಾಣವಾದರೆ, ಇನ್ನೊಂದು ಈ ಯೋಗದಲ್ಲಿ 84 ದೇಶದ ಪ್ರಜೆಗಳು ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಯೋಗ ಮಾಡುವ ಮೂಲಕ ಎರಡನೇ ದಾಖಲೆ ನಿರ್ಮಾಣವಾಗಿದೆ. ಆದರೆ ಈ ಎರಡು ದಾಖಲೆಗಳು ಒಂದು ವರ್ಷದ ಬಳಿಕ ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ಮುದ್ರಣವಾಗಲಿದೆ.

ಈ ವರ್ಷ ಯಾಕಿಲ್ಲ?

ಗಿನ್ನಿಸ್ ವಿಶ್ವ ದಾಖಲೆ ಸಾರ್ವಜನಿಕ ಸಂಪನ್ಮೂಲ ಅಧಿಕಾರಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಈ ವರ್ಷದ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ನೊಂದಣಿಯಾಗಲು ಇದ್ದ ಡೆಡ್ಲೈನ್ ಮುಗಿದಿದೆ. ಹೀಗಾಗಿ 2016 ಸೆಪ್ಟೆಂಬರ್ ವರೆಗೆ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಈ ಎರಡು ದಾಖಲೆಗಳು ಮುದ್ರಣವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿವರ್ಷ 40 ಸಾವಿರಕ್ಕೂ ಹೆಚ್ಚು ದಾಖಲೆಗಳು ನಿರ್ಮಾಣವಾಗುತ್ತದೆ. ಆದರೆ ಗಿನ್ನಿಸ್ ವಿಶ್ವ ದಾಖಲೆಯ ಪುಸ್ತಕದಲ್ಲಿ 4 ಸಾವಿರ ದಾಖಲೆಗಳು ಮಾತ್ರ ಮುದ್ರಣವಾಗುತ್ತದೆ. ಹೀಗಾಗಿ ಕೆಲವು ದಾಖಲೆಗಳು ವಿಶ್ವ ದಾಖಲೆಯ ಪುಸ್ತಕದಲ್ಲಿ ಮುದ್ರಣವಾಗುವುದಿಲ್ಲ ಎಂದು ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ಈ ಹಿಂದೆ 2005 ನವೆಂಬರ್ 5 ರಂದು 29,973 ಮಂದಿ ಮಧ್ಯ ಪ್ರದೇಶದ ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದ ವಿವೇಕಾನಂದ ಕೇಂದ್ರದಲ್ಲಿ ಯೋಗ ಪ್ರದರ್ಶನ ನೀಡಿದ್ದು ಇದುವರೆಗಿನ ದಾಖಲೆಯಾಗಿತ್ತು.

Write A Comment