ಮನೋರಂಜನೆ

ಮಹಿಳಾ ಕ್ರಿಕೆಟಿಗರು ಪಡೆಯುವ ಸಂಭಾವನೆಯೆಷ್ಟು ಗೊತ್ತಾ..?

Pinterest LinkedIn Tumblr

5350indian_womens_cricket_team_wins_against_west_indies

ಭಾರತದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಭಾರತ ತಂಡಕ್ಕೆ ಆಯ್ಕೆಯಾಗುವ ಆಟಗಾರರು ಕೋಟ್ಯಾಂತರ ರೂ. ಹಣ ಸಂಪಾದಿಸುತ್ತಾರೆ. ಕ್ರಿಕೆಟ್ ಎಂದರೆ ಹಣದ ಹೊಳೆ ಎಂಬ ಮಾತಿದೆ. ಹಾಗಾದರೆ ಮಹಿಳಾ ಕ್ರಿಕೆಟಿಗರು ಪಡೆಯುವ ಸಂಭಾವನೆಯೆಷ್ಟು ಎಂಬುದರ ವಿವರ ಇಲ್ಲಿದೆ ನೋಡಿ.

ಪುರುಷ ಕ್ರಿಕೆಟಿಗರು ಪಡೆಯುವ ಮೊತ್ತದ ಶೇ.ರಷ್ಟನ್ನೂ ಮಹಿಳಾ ಆಟಗಾರರು ಪಡೆಯುತ್ತಿಲ್ಲ. ಒಂದು ಟೆಸ್ಟ್ ಪಂದ್ಯ ಆಡಿದ ಪುರುಷ ಆಟಗಾರರಿಗೆ 7 ಲಕ್ಷ ರೂ. ನೀಡಿದರೆ ಅದೇ ಮಹಿಳಾ ಆಟಗಾರ್ತಿಗೆ ಇಡೀ ಸರಣಿ ಆಡಿದರೂ 1 ಲಕ್ಷ ರೂ. ಲಭಿಸುತ್ತದೆ. ಪುರುಷ ಆಟಗಾರರಿಗೆ ಏಕ ದಿನ ಪಂದ್ಯಕ್ಕೆ 4 ಲಕ್ಷ ರೂ., ಟ್ವೆಂಟಿ 20 ಪಂದ್ಯಕ್ಕೆ 2 ಲಕ್ಷ ರೂ. ಸಂಭಾವನೆ ನೀಡಲಾಗುತ್ತದೆ.

ರಣಜಿ ಪಂದ್ಯವನ್ನಾಡುವ ಪುರುಷ ಆಟಗಾರನಿಗೆ 1.40 ಲಕ್ಷ ರೂ. ಲಭಿಸಿದರೆ ಅಂತರರಾಜ್ಯ ಪಂದ್ಯವನ್ನಾಡುವ ಮಹಿಳಾ ಆಟಗಾರ್ತಿಗೆ ಸಿಗುವುದು ಕೇವಲ 2.50 ಸಾವಿರ ರೂ. ಮಾತ್ರ. ಅಂತರರಾಜ್ಯ ಟ್ವೆಂಟಿ 20 ಪಂದ್ಯವನ್ನಾಡುವ ಮಹಿಳೆಯರು ಕೇವಲ 1.20 ಸಾವಿರ ರೂ. ಪಡೆಯುತ್ತಾರೆ. ರಣಜಿ ಚಾಂಪಿಯನ್ನರಿಗೆ 2 ಕೋಟಿ ರೂ. ಬಹುಮಾನ ನೀಡಿದರೆ ಅಂತರರಾಜ್ಯ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮಹಿಳಾ ತಂಡಕ್ಕೆ ಕೇವಲ 3 ಲಕ್ಷ ರೂ. ಬಹುಮಾನ ದೊರೆಯುತ್ತದೆ. ಮಹಿಳಾ ಕ್ರಿಕೆಟಿಗರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಈ ಮೂಲಕ ವ್ಯಕ್ತವಾಗುತ್ತದೆ.

Write A Comment