ಮನೋರಂಜನೆ

ದೀಪಿಕಾ- ರಣವೀರ್ ಸಂಬಂಧದಲ್ಲಿ ಬಿರುಕು..

Pinterest LinkedIn Tumblr

206Ranveer-Singh-Deepika-Padukone-41213

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಮಧ್ಯೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆಯೇ..? ಬಾಲಿವುಡ್ ನ ಬಹುತೇಕ ಪ್ರೇಮ್ ಕಹಾನಿಗಳಂತೆ ಇವರ ಸಂಬಂಧದಲ್ಲೂ ಬ್ರೇಕ್ ಅಪ್ ಆಗಿದೆಯೇ ಎಂಬ ಕುತೂಹಲ ಬಾಲಿವುಡ್ ಅಂಗಳದಲ್ಲಿ ಮೂಡಿದೆ.

ಸಂಜಯ್ ಲೀಲಾ ಬನ್ಸಾಲಿಯವರ ‘ಬಾಜಿರಾವ್ ಮಸ್ತಾನಿ’ ಚಿತ್ರದಲ್ಲಿ ಇವರಿಬ್ಬರೂ ಕಾಣಿಸಿಕೊಂಡಿದ್ದು, ಚಿತ್ರದ ಸೆಟ್ ನಲ್ಲಿ ಪರಸ್ಪರ ಮಾತನಾಡುತ್ತಿಲ್ಲವೆಂಬ ಗುಸುಗುಸು ಚಿತ್ರ ತಂಡದಿಂದಲೇ ಹೊರ ಬಿದ್ದಿದೆ. ಈ ಮೊದಲು ಪ್ರತಿ ಶಾಟ್ ಚಿತ್ರೀಕರಣದ ನಂತರ ಬಿಡುವಿನಲ್ಲಿ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದ ಈ ಜೋಡಿ ಈಗ ಅಪರಿಚಿತರಂತೆ ವರ್ತಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಣಬೀರ್ ಕಪೂರ್ ನಿಂದ ದೂರಾದ ಬಳಿಕ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಜೊತೆ ಅತ್ಮೀಯರಾಗಿದ್ದರು. ಅಲ್ಲದೇ ತಮ್ಮ ಕುಟುಂಬದ ಖಾಸಗಿ ಪಾರ್ಟಿಗಳಿಗೂ ರಣವೀರ್ ಸಿಂಗ್ ಅವರನ್ನು ದೀಪಿಕಾ ತಪ್ಪದೇ ಆಹ್ವಾನಿಸುತ್ತಿದ್ದರು. ಈ ಜೋಡಿ ಬೆಂಗಳೂರಿನಲ್ಲಿ ಬಹಿರಂಗವಾಗಿಯೇ ಭರ್ಜರಿ ಶಾಪಿಂಗ್ ನಡೆಸಿತ್ತು.

ಇದನ್ನೆಲ್ಲಾ ಕಂಡಿದ್ದ ಚಿತ್ರೋದ್ಯಮದ ಮಂದಿ ಕೆಲ ತಿಂಗಳುಗಳಲ್ಲೇ ದೀಪಿಕಾ ಹಾಗೂ ರಣವೀರ್ ಸಿಂಗ್ ವಿವಾಹ ಪಕ್ಕಾ ಎಂದು ಮಾತನಾಡಿಕೊಂಡಿತ್ತಲ್ಲದೇ ಈ ವಿವಾಹಕ್ಕೆ ಇಬ್ಬರ ಕುಟುಂಬದ ಹಿರಿಯರ ಸಮ್ಮತಿಯೂ ಇದೆ ಎಂದು ಭಾವಿಸಿತ್ತು. ಆದರೆ ಇದೀಗ ದಿಢೀರಾಗಿ ದೀಪಿಕಾ ಹಾಗೂ ರಣವೀರ್ ಪರಸ್ಪರ ಮಾತನಾಡುವುದನ್ನು ನಿಲ್ಲಿಸಿರುವುದನ್ನು ಕಂಡ ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕುಂಟಾಗಿರಬಹುದೆಂದು ಹೇಳುತ್ತಿದೆ.

Write A Comment