ಮನೋರಂಜನೆ

ಅಮೆರಿಕದ ಮಹಿಳೆ ಮೇಲೆ ಅತ್ಯಾಚಾರ: ಚಿತ್ರನಿರ್ಮಾಪಕ ಫಾರೂಕಿ ಬಂಧನ

Pinterest LinkedIn Tumblr

rape

ನವದೆಹಲಿ:  35 ವರ್ಷ ವಯಸ್ಸಿನ ಅಮೆರಿಕ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ದೆಹಲಿ ಪೊಲೀಸರು ಚಿತ್ರನಿರ್ಮಾಪಕ ಮಹಮದ್ ಫಾರೂಕಿ ಎಂಬವನನ್ನು ಬಂಧಿಸಿದ್ದಾರೆ.  2010ರಲ್ಲಿ ಪೀಪ್ಲಿ ಲೈವ್ ಚಿತ್ರಕ್ಕೆ ಸಹನಿರ್ದೇಶನ ಮಾಡಿ ಹೆಸರು ಗಳಿಸಿದ್ದ ಫಾರೂಕಿಯನ್ನು 6 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

ಕಳೆದ ಮಾರ್ಚ್‌ನಲ್ಲಿ ಸಂಶೋಧನೆಗಾಗಿ 35 ವರ್ಷ ವಯಸ್ಸಿನ ಅಮೆರಿಕದ ವಿದ್ಯಾರ್ಥಿನಿ ಭಾರತಕ್ಕೆ ಆಗಮಿಸಿದ್ದರು. ಶುಕ್ರವಾರ ಅವರು ತನ್ನ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ದೆಹಲಿ ಪೊಲೀಸರಿಗೆ ದೂರು ನೀಡಿದ ಬಳಿಕ  ಫಾರೂಕಿಯನ್ನು ತನಿಖೆ ಮಾಡಿದ ಪೊಲೀಸರು ನಿನ್ನೆ ಬಂಧಿಸಿದ್ದಾರೆ.

43 ವರ್ಷ ವಯಸ್ಸಿನ ಫೈರೂಕಿ ಚಿತ್ರಕಥೆ ಲೇಖಕಿ ಅನುಶಾ ರಿಜ್ವಿಯನ್ನು ಮದುವೆಯಾಗಿದ್ದು,  ಭಾರತದಲ್ಲಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದ ಕಥಾವಸ್ತುವನ್ನು ಹೊಂದಿದ ಹಾಸ್ಯಚಿತ್ರ ಪೀಪ್ಲಿ ಲೈವ್ ಅನ್ನು ನಿರ್ದೇಶಿಸಿದ್ದರು.

Write A Comment