ಮನೋರಂಜನೆ

ಸಿನಿಮಾದಲ್ಲಿ ಎಮ್ಮೆ ಮೇಲಿನ ಅತ್ಯಾಚಾರ ತೋರಿಸಿ ಕೊಲೆ ಸುಪಾರಿ ಪಡೆದ ನಿರ್ದೇಶಕ!

Pinterest LinkedIn Tumblr

director-vinod-kapri

ಮುಂಬೈ: ವ್ಯಕ್ತಿಯೊಬ್ಬ ಎಮ್ಮೆಯನ್ನು ಅತ್ಯಾಚಾರ ಮಾಡುವುದೆಂದರೇನು? ಮತ್ತೆ ಆ ಎಮ್ಮೆಯನ್ನು ಆತ ವಿವಾಹವಾಗುವಂತೆ ಆದೇಶ ಕೊಡುವುದೆಂದರೇನು? ಅಪಹಾಸ್ಯಕ್ಕೂ ಮಿತಿ ಬೇಡವೇ? ಇಂಥದ್ದನ್ನೆಲ್ಲ ನಾವು ಸಹಿಸಲ್ಲ. ಇದು ನಮ್ಮ ಖಾಪ್ ವ್ಯವಸ್ಥೆಯನ್ನೇ ಅಣಕಿಸಿದಂತಿದೆ. ಹೀಗಾಗಿ ಆತನ ತಲೆದಂಡ ಆಗಲೇಬೇಕು! ಇದೊಂಥರ ಭರ್ಜರಿ ಆಫರ್.

ಬಾಲಿವುಡ್ ನಿರ್ದೇಶಕನೊಬ್ಬನ ಕೊಲ್ಲಲು ಉತ್ತರ ಪ್ರದೇಶದ ಖಾಪ್ ಪಂಚಾಯತ್‍ವೊಂದು ಬಹಿರಂಗ ಸುಪಾರಿ ಕೊಟ್ಟಿದೆ. ಕೊಲೆ ಮಾಡಿದವರಿಗೆ ಕೊಡುವ ಕೊಡುಗೆ ಏನು ಗೊತ್ತೇ? ಬರೋಬ್ಬರಿ 51 ಎಮ್ಮೆಗಳು!!! ಇಷ್ಟಕ್ಕೆಲ್ಲ ಕಾರಣವಾಗಿದ್ದು ಇನ್ನೂ ತೆರೆ ಕಾಣಬೇಕಿರುವ `ಮಿಸ್ ತನಕ್‍ಪುರ್ ಹಾಝಿರ್ ಹೊ’ ಚಿತ್ರದ ಟ್ರೈಲರ್. ಇದು ಖಾಪ್ ಪಂಚಾಯತ್ ಕಥಾ ಹಂದರವುಳ್ಳ ಚಿತ್ರವಾಗಿದ್ದು, ಇದರ ಟ್ರೈಲರ್‍ನಲ್ಲಿ ಬಿಡುಗಡೆಯಾದ ಚಿತ್ರದ ಕೆಲವು ಸನ್ನಿವೇಶಗಳು ಸಾಕಷ್ಟು ವಿವಾದ ಹುಟ್ಟುಹಾಕಿದ್ದು, ನಿರ್ದೇಶಕ ವಿನೋದ್ ಕಾಪ್ರಿ ಅವರ ಜೀವಕ್ಕೆ ಕುತ್ತು ತಂದಿದೆ.

ಏನಿದು ಚಿತ್ರಕಥೆ?: ಒಂದು ಗ್ರಾಮದಲ್ಲಿ ಚಿತ್ರಕಥೆ ಪ್ರಾರಂಭವಾಗುತ್ತದೆ. ಗ್ರಾಮವೆಂದ ಮೇಲೆ ಶ್ರೀಮಂತ ವ್ಯಕ್ತಿಗಳು ಇರುತ್ತಾರೆ. ಹೀಗೆ ಅಲ್ಲಿದ್ದ ಶ್ರೀಮಂತನೊಬ್ಬನ ಮೇಲೆ ಅದೇ ಗ್ರಾಮದ ವ್ಯಕ್ತಿಯೊಬ್ಬ ಅತ್ಯಾಚಾರ ಆರೋಪ ಹೊರಿಸುತ್ತಾನೆ. ಅದೂ ಮಿಸ್ ತನಕ್‍ಪುರ್ ಎಂಬ ಹೆಸರಿನ ಎಮ್ಮೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ. ಕೊನೆಗೆ ಪ್ರಕರಣ ಖಾಪ್

ಪಂಚಾಯತ್ ಮೆಟ್ಟಿಲೇರುತ್ತದೆ. ವಾದ-ವಿವಾದಗಳನ್ನು ಆಲಿಸಿದ ಖಾಪ್ ಮುಖ್ಯಸ್ಥರು ನಂತರ ಕೊಡುವ ತೀರ್ಮಾನ ಏನು ಗೊತ್ತೇ? ಈ ಗಣ್ಯ ವ್ಯಕ್ತಿಯು ಬಲಾತ್ಕಾರ ಮಾಡಿದ ಎಮ್ಮೆಯನ್ನೇ

ವಿವಾಹವಾಗಬೇಕು!

ಪಿತ್ತ ನೆತ್ತಿಗೇರಿತು

ಚಿತ್ರದ ಟ್ರೈಲರ್ ನೋಡಿದ ಉತ್ತರ ಪ್ರದೇಶದ ಖಾಪ್ ಪಂಚಾಯತ್ ಮುಖ್ಯಸ್ಥರ ಪಿತ್ತ ನೆತ್ತಿಗೇರಿಸಿತ್ತು. ಎಮ್ಮೆಯನ್ನು ಅತ್ಯಾಚಾರ ಮಾಡಿದ ಹಾಗೆ ಚಿತ್ರದಲ್ಲಿ ತೋರಿಸಿದ್ದರಿಂದ ಚಿತ್ರದ ನಿರ್ದೇಶಕ ವಿನೋದ್ ಕಾಪ್ರಿ ಅವರನ್ನು ಕೊಲೆ ಮಾಡಿದವರಿಗೆ ಪ್ರತಿಯಾಗಿ 51 ಎಮ್ಮೆಗಳನ್ನು ಕೊಡುವುಗಾದಿ ಘೋಷಣೆ ಮಾಡಿದ್ದಾರೆ.

ಇದರಿಂದ ಭಯಗೊಂಡಿರುವ ನಿರ್ದೇಶಕ ಕಾಪ್ರಿ, ತಮ್ಮ ಮನೆಗೆ ಪೊಲೀಸ್ ಬಿಗಿ ಭದ್ರತೆಯನ್ನು ಪಡೆದಿದ್ದಾರೆ. ಈ ಚಿತ್ರದ ಬಗ್ಗೆ ಈಗಾಗಲೇ ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್, ಖ್ತಾಯ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರಿಂದಲೂ ಭಾರಿ ಮೆಚ್ಚುಗೆ ವ್ಯಕ್ತಪವಾಗಿತ್ತು. ಆದರೆ, ಖಾನ್ ಪಂಚಾಯತ್ ಮುಖಂಡರ ಕಣ್ಣನ್ನು ಕೆಂಪಗಾಗಿಸಿದೆ.

ನನ್ನ ಕುಟುಂಬಕ್ಕೆ ರಕ್ಷಣೆ ಬೇಕು

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿನೋದ್ ಕಾಪ್ರಿ, ನಿಜವಾಗಿ ಹೇಳಬೇಕೆಂಗರೆ, ಕೊಲೆ ಬೆದರಿಕೆ ಬಂದಿರುವುದರಿಂದ ನಾನು ಸ್ವಲ್ಪ ಗಾಬರಿ ಹಾಗೂ ಆತಂಕಕ್ಕೊಳಗಾಗಿದ್ದೇನೆ. ಆದರೆ, ಇದೇ ಸಂದರ್ಭದಲ್ಲಿ ಚಿತ್ರದಲ್ಲಿ ನಾನು ಏನನ್ನು ಹೇಳಲು ಹೊರಟಿದ್ದಿನೋ ಅದೇ ರೀತಿಯ ಘಟನೆ ಈ ಹೇಳಿಕೆಗಳಿಂದ ದೃಢವಾಗುತ್ತದೆ. ನನಗೆ ನನ್ನ ಬಗ್ಗೆ ಯಾವುದೇ ಚಿಂತೆ ಇಲ್ಲ. ನನ್ನ ಕುಟುಂಬಕ್ಕೆ ರಕ್ಷಣೆ ಬೇಕಿದೆ. ಇದಕ್ಕಾಗಿಯೇ ಪೊಲೀಸ್ ಭದ್ರತೆ ಕೇಳಿದ್ದೇನೆ. ಕಾರಣ, ಇನ್ನು ಎರಡು ವಾರದಲ್ಲಿ ಮಿಸ್ ತನಕ್ ಪುರ್ ಹಾಝಿರ್ ಚಿತ್ರ ತೆರೆ ಕಾಣಲಿದ್ದು, ನಾನು ಚಿತ್ರದ ಬಿಡುಗಡೆಗಾಗಿ ಮುಂಬೈನಲ್ಲಿದ್ದೇನೆ. ಆದರೆ, ನನ್ನು ಕುಟುಂಬ ಉತ್ತರ ಪ್ರದೇಶದ ನೋಯ್ಡಾದಲ್ಲಿದೆ. ಹೀಗಾಗಿ ನನ್ನ ಕುಟುಂಬದ ರಕ್ಷಣೆ ವಿಷಯ ತಲೆಯಲ್ಲಿ ಕಾಡುತ್ತಲಿರುತ್ತದೆ. ಪೊಲೀಸರು ಅವರ ರಕ್ಷಣೆ ಹೊಣೆ ಹೊತ್ತರೆ ನಾನು ನಿರಾಳವಾಗುತ್ತೇನೆ ಎಂದು ಹೇಳಿದ್ದಾರೆ.

Write A Comment