ಮನೋರಂಜನೆ

ಬೆಂಗಳೂರಿನಲ್ಲಿ ಗಡ್ಡ ಬೋಳಿಸಿಕೊಂಡ ಪವನ್ ಕಲ್ಯಾಣ್!: ಗಬ್ಬರ್ ಸಿಂಗ್-2 ಚಿತ್ರಕ್ಕೆ ಭರ್ಜರಿ ತಯಾರಿ

Pinterest LinkedIn Tumblr

pawan-kalyan

ಬೆಂಗಳೂರು: ಗೋಪಾಲ ಗೋಪಾಲ ಚಿತ್ರದ ಬಳಿಕ ತಮ್ಮ ಬಹುನಿರೀಕ್ಷಿತ ಗಬ್ಬರ್ ಸಿಂಗ್-2 ಚಿತ್ರಕ್ಕೆ ತಯಾರಿ ನಡೆಸುತ್ತಿರುವ ಪವನ್ ಕಲ್ಯಾಣ್ ಹಲವು ದಿನಗಳಿಂದ ಉದ್ದುದ್ದ ಗಡ್ಡ ಬಿಟ್ಟು ಕುತೂಹಲ ಮೂಡಿಸಿದ್ದರು. ಆದರೆ ಸದ್ದಿಲ್ಲದೆ ಬೆಂಗಳೂರಲ್ಲಿ ಗಡ್ಡ ಬೋಳಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿರುವ ಪವನ್ ಕಲ್ಯಾಣ್ ಗಡ್ಡ ಬೋಳಿಸಲು ಸಲೂನ್‘ಗೆ ತೆರಳುತ್ತಿದ್ದ ಸಂದರ್ಭ ಅಭಿಮಾನಿಯೊಬ್ಬ ಅವರ ಫೋಟೋ ಕ್ಲಿಕ್ಕಿಸಿದ್ದಾನೆ.

ಗಬ್ಬರ್ ಸಿಂಗ್-2 ಚಿತ್ರದ ತಯಾರಿಯಲ್ಲಿರುವ ಪವನ್ ಕಲ್ಯಾಣ್ ಅದಕ್ಕಾಗಿಯೇ ಉದ್ದುದ್ದ ಗಡ್ಡ ಬಿಟ್ಟಿದ್ದಾರೆ ಎನ್ನಲಾಗುತ್ತಿತ್ತು. ಸದ್ಯ, ಬೆಂಗಳೂರಲ್ಲೇ ಇರುವ ಪವನ್ ಕಲ್ಯಾಣ್ ಚಿತ್ರಕ್ಕಾಗಿ ಬಾಡಿ ಫಿಟ್ ಮಾಡುತ್ತಿದ್ಧಾರೆ ಎನ್ನಲಾಗಿದೆ.

Write A Comment