ಕರ್ನಾಟಕ

ಕರ್ನಾಟಕ ರಾಜ್ಯ ಮುಕ್ತ ವಿವಿ ಮಾನ್ಯತೆ ರದ್ದು: ಯುಜಿಸಿ ಆದೇಶ

Pinterest LinkedIn Tumblr

mukta

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ) ಮಾನ್ಯತೆ ರದ್ದು ಮಾಡಿರುವುದಾಗಿ ತಿಳಿಸಿದೆ. ಇಂದು ಮಧ್ಯಾಹ್ನ ಯುಜಿಸಿ ಪತ್ರ ಬಂದು ತಲುಪಿದೆ. ಯಾವುದೇ ಕೋರ್ಸ್‌ಗಳಿಗೆ ಮಾನ್ಯತೆಯಿಲ್ಲವೆಂದೂ ವಿವಿಯ ಎಲ್ಲಾ ಕೋರ್ಸ್‌ಗಳನ್ನು ರದ್ದುಮಾಡಿರುವುದಾಗಿಯೂ ಅದು ತಿಳಿಸಿದೆ.

ಈ ಕುರಿತು ಮುಕ್ತ ವಿವಿ ಕುಲಪತಿ ಎಂ.ಜಿ. ಕೃಷ್ಣನ್ ”ವಿವಿಯ ಎಲ್ಲಾ ಕೋರ್ಸ್‌ಗಳನ್ನು ರದ್ದುಗೊಳಿಸಲಾಗಿದೆ. ಇದು ತಾತ್ಕಾಲಿಕವಾದುದು. ನೀವು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ” ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.  ಯುಜಿಸಿ ನಿರ್ಧಾರವನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಲಿದ್ದೇವೆ ಎಂದೂ ಅವರು ತಿಳಿಸಿದರು. ನಾನು ಅಧಿಕಾರ ತೆಗೆದುಕೊಂಡಾಗ ತಾಂತ್ರಿಕ ಕೋರ್ಸ್ ನಿಲ್ಲಿಸಿದ್ದೆ. ನಮ್ಮ ಮೇಲೆ ಯುಜಿಸಿ ಕಣ್ಣು ಯಾಕೆ ಬಿದ್ದಿದೆ ಗೊತ್ತಾಗುತ್ತಿಲ್ಲ ಎಂದು ಕೃಷ್ಣನ್ ಹೇಳಿದ್ದಾರೆ.

2012-13ರ ನಂತರ ಕೋರ್ಸ್ ತೆಗೆದುಕೊಂಡವರಿಗೆ ಇದು ಅನ್ವಯಿಸುತ್ತದೆ ಎಂದು ಯುಜಿಸಿ ಹೇಳಿದೆ. ಯುಜಿಸಿ ಕಾರ್ಯದರ್ಶಿ ಜಸ್ಪಾಲ್ ಸಂಧು ಈ ಆದೇಶ ನೀಡಿದ್ದು, ಕೋರ್ಸ್‌ಗಳಿಗೆ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ ಮತ್ತು ಯುಜಿಸಿ ವೆಬ್‌ಸೈಟ್‌ನಲ್ಲಿ ಅಪಲೋಡ್ ಮಾಡಲಾಗಿದೆ. ವೃತ್ತಿಪರ, ತಾಂತ್ರಿಕ ಮತ್ತು ಆನ್‌ಲೈನ್ ಕೋರ್ಸ್‌ಗಳಿಗೆ ಮಾನ್ಯತೆಯಿಲ್ಲ ಎಂದೂ ಯುಜಿಸಿ ಹೇಳಿದೆ.

Write A Comment