ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿರುವ ನೂತನ ಚಿತ್ರ ಗಣಿ ದಿ ಬಾಸ್ ಚಿತ್ರಕ್ಕೆ ತಮಿಳು ನಟಿ ರನ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಗೆ ಹಿರೋಯಿನ್ ಆಗಿದ್ದ ರನ್ಯಾ ಸದ್ಯ ತಮಿಳಿನಲ್ಲಿ ವಿಕ್ರಮ್ ಪ್ರಭು ಜೊತೆ ವಾಘಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. 2 ನೇ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ರನ್ಯಾ ಸಂತಸ ವ್ಯಕ್ತಪಡಿಸಿದ್ದಾರಂತೆ.
ಜುಲೈ 2ರಂದು ನಟ ಗಣೇಶ್ ಹುಟ್ಟಹಬ್ಬ ಇದೆ. ಹೀಗಾಗಿ ಅಂದು ಚಿತ್ರೀಕರಣ ಆರಂಭಿಸುವುದಾಗಿ ನಿರ್ಮಾಪಕ ಎಸ್.ವಿ ಬಾಬು ತಿಳಿಸಿದ್ದಾರೆ.
ಗಣಿ ದಿ ಬಾಸ್ ತೆಲುಗಿನ ಪಟಾಸ್ ಚಿತ್ರದ ರಿಮೇಕ್. ತೆಲುಗಿನಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅಭಿನಯಿಸಿದ್ದರು. ನಾಯಕ ಪ್ರಧಾನವಾದ ಈ ಚಿತ್ರದಲ್ಲಿ ಗಣೇಶ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣಿ ದಿ ಬಾಸ್ ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶಿಸಲಿದ್ದಾರೆ. ಮೊದಲ ಬಾರಿಗೆ ಗಣೇಶ್ ಪೊಲೀಸ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಗಣಿ ಅಭಿಮಾನಿಗಳಿಗೆ ಕುತೂಹಲಮೂಡಿಸಿದೆ.
