ಮನೋರಂಜನೆ

ಮಿರ್ಚಿ ಮಂಡಕ್ಕಿ ರುಚಿಗೆ ಮಾರು ಹೋದ ರಾಧಿಕಾ ಪಂಡಿತ್..!

Pinterest LinkedIn Tumblr

4164lcvtppabejhsi

ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಈಗ ಹುಬ್ಬಳ್ಳಿಯಲ್ಲಿದ್ದಾರೆ. ಪುನೀತ್ ರಾಜಕುಮಾರ್ ಅವರೊಂದಿಗೆ ನಟಿಸುತ್ತಿರುವ ‘ದೊಡ್ಮನೆ ಹುಡುಗ’ ಚಿತ್ರದ ಚಿತ್ರೀಕರಣ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ರಾಧಿಕಾ ಪಂಡಿತ್ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಹುಬ್ಬಳ್ಳಿಗೆ ಹೋದ ಮೇಲೆ ಅಲ್ಲಿನ ಫೇಮಸ್ ಮಿರ್ಚಿ ಮಂಡಕ್ಕಿ, ಜೋಳದ ರೊಟ್ಟಿ ಸವಿಯದಿರಲು ಸಾಧ್ಯವೇ. ರಾಧಿಕಾ ಪಂಡಿತ್ ಸಹ ಇವುಗಳ ರುಚಿ ಸವಿದಿದ್ದಾರೆ. ಇದರ ರುಚಿಗೆ ಮಾರು ಹೋಗಿರುವ ಅವರು ಟ್ವೀಟ್ ಮಾಡುವ ಮೂಲಕ ಇದನ್ನು ವ್ಯಕ್ತಪಡಿಸಿದ್ದಾರೆ.

‘ಹುಬ್ಬಳ್ಳಿ ಮಂದಿಗೆ ನಮಸ್ಕಾರ, ಅಟ್ ಹುಬ್ಬಳ್ಳಿ ಶೂಟಿಂಗ್ ಫಾರ್ ‘ದೊಡ್ಮನೆ ಹುಡುಗ’. ಮಿರ್ಚಿ ಮಂಡಕ್ಕಿ, ಜೋಳದ ರೊಟ್ಟಿ ಇನ್ ನಮ್ಮ ಹುಬ್ಬಳ್ಳಿ’ ಎಂದು ರಾಧಿಕಾ ಪಂಡಿತ್ ಟ್ವೀಟ್ ಮಾಡಿದ್ದಾರೆ.

Write A Comment