ಅಂತರಾಷ್ಟ್ರೀಯ

ಇಲ್ಲಿದೆ ಫೇಸ್ ಬುಕ್ ಬಳಕೆದಾರರನ್ನು ಬೆಚ್ಚಿ ಬೀಳಿಸುವ ಸುದ್ದಿ..!

Pinterest LinkedIn Tumblr

5365facebook_416x416

ಅತ್ಯಂತ ಪ್ರಸಿದ್ದ ಸಾಮಾಜಿಕ ಜಾಲ ತಾಣವಾದ ಫೇಸ್ ಬುಕ್  ಕುರಿತು ಇದೀಗ ಆರೋಪವೊಂದು ಕೇಳಿ ಬಂದಿದ್ದು ಈ ಜಾಲ ತಾಣದ ಬಳಕೆದಾರರನ್ನು ಬೆಚ್ಚಿ ಬೀಳಿಸಿದೆ.

ಹೌದು. ಯಾವುದೇ ಒಬ್ಬ ವ್ಯಕ್ತಿ ಫೇಸ್ ಬುಕ್ ಖಾತೆ ಹೊಂದಿದ್ದು, ಅದನ್ನು ಉಪಯೋಗಿಸುವುದನ್ನು ಒಂದೊಮ್ಮೆ ಸ್ಥಗಿತಗೊಳಿಸಿದರೂ ಆತನನ್ನು ಫೇಸ್ ಬುಕ್  ಟ್ರ್ಯಾಕ್ ಮಾಡುತ್ತದೆಯಂತೆ. ಫೇಸ್ ಬುಕ್ ಇದಕ್ಕಾಗಿಯೇ ಗುಪ್ತಚರರನ್ನು ನೇಮಿಸಿಕೊಂಡಿದ್ದು, ಒಮ್ಮೆ ಫೇಸ್ ಬುಕ್ ಖಾತೆಯನ್ನು ಹೊಂದಿದ್ದಾನೆ ಎನ್ನಲಾದ ವ್ಯಕ್ತಿಯ ಸಿಸ್ಟಂ ನಲ್ಲಿರುವ ಎಲ್ಲ ಮಾಹಿತಿಗಳನ್ನು ಕದಿಯುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಫೇಸ್ ಬುಕ್ ಖಾತೆಯನ್ನೇ ಡಿಲಿಟ್ ಮಾಡಿದರೂ ಇದು ತಪ್ಪುವುದಿಲ್ಲ ಎಂಬ ಮಾಹಿತಿ ಹರಿದಾಡುತ್ತಿದೆ.

ಆದರೆ ಈ ಕುರಿತು ಸ್ವತಃ ಫೇಸ್ ಬುಕ್ ಸ್ಪಷ್ಟನೆ ನೀಡಿದ್ದು ಇದೊಂದು ಸುಳ್ಳು ಸುದ್ದಿಯಾಗಿದ್ದು, ಇದನ್ನು ಕೆಲವರು ನಮ್ಮ ಇಮೇಜ್ ಹಾಳು ಮಾಡುವ ದೃಷ್ಟಿಯಿಂದ ಹರಿ ಬಿಡುತ್ತಿದ್ದಾರೆ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಾಗಾಗಿ ನಮ್ಮ ಜಾಲ ತಾಣದ ಬಳಕೆದಾರರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.

Write A Comment