ಮನೋರಂಜನೆ

ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 511.8 ದಶಲಕ್ಷ ಡಾಲರ್ ಬಾಚಿಕೊಂಡ ‘ಜುರಾಸಿಕ್ ವರ್ಲ್ಡ್’

Pinterest LinkedIn Tumblr

Jurassic World

ಸೋಲು ಗೆಲುವಿನ ಸೋಪಾನ; ಗೆಲುವು ಮತ್ತಷ್ಟು ಗೆಲುವುಗಳಿಗೆ ಭೀಮಬಲ! ಹಾಲಿವುಡ್ ಇಂಥ ಭೀಮಬಲ ನೆಚ್ಚಿಕೊಂಡು ಮಾಡುವ ಸಿನಿಮಾಗಳಿಗೆ ಲೆಕ್ಕವಿಲ್ಲ. ವಾಸ್ತವ ಜಗತ್ತಿನಲ್ಲಿ ಇಲ್ಲದಿರುವ ವಸ್ತು-ವಿಶೇಷಗಳನ್ನು ತೀರಾ ಸಹಜವಾಗಿ ಕಾಣಿಸಿ, ಅಸಾಮಾನ್ಯ ಲಾಭದಲ್ಲಿ ಬೀಗುವುದು ಅದರ ಜಾಯಮಾನ. ‘ಜುರಾಸಿಕ್ ವರ್ಲ್ಡ್’ ಈ ಮಾತಿಗೆ ಹೊಸ ಸೇರ್ಪಡೆ. 1993ರಲ್ಲಿ ‘ಜುರಾಸಿಕ್ ಪಾರ್ಕ್’ ಬಂದಮೇಲೆ, ‘ದ ಲಾಸ್ಟ್ ವರ್ಲ್ಡ್: ಜುರಾಸಿಕ್ ಪಾರ್ಕ್’ (1997), ‘ಜುರಾಸಿಕ್ ಪಾರ್ಕ್ 3’ (2001) ಚಿತ್ರಗಳು ಕ್ಲಿಕ್ ಆಗಿದ್ದು ನಿಮಗೆ ಗೊತ್ತೇ ಇದೆ. ಆ ಸರಣಿಯ ಲೇಟೆಸ್ಟ್ ಅವತರಣಿಕೆಯಾಗಿ ಜೂ. 12ಕ್ಕೆ ಬಿಡುಗಡೆಯಾಗಿತ್ತು ‘…ವರ್ಲ್ಡ್’. ಬಾಕ್ಸ್​ಆಫೀಸ್​ನಲ್ಲಿ ಈ ಸಿನಿಮಾ ಏನಾದರೊಂದು ಕಮಾಲ್ ಮಾಡಿಯೇ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದೀಗ ಅಕ್ಷರಶಃ ನಿಜವಾಗಿದೆ. ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ. ಅಂದರೆ, 3280 ಕೋಟಿಗೂ ಹೆಚ್ಚು!! ಇದರ ಬಜೆಟ್ 961 ಕೋಟಿ ಅನ್ನುವುದು ನಿಮ್ಮ ಗಮನಕ್ಕೆ.

ಇಲ್ಲಿಯವರೆಗಿನ ಹಾಲಿವುಡ್ ಇತಿಹಾಸದತ್ತ ತಿರುಗಿ ನೋಡಿದರೆ, ಮೊದಲ ವಾರಾಂತ್ಯದಲ್ಲಿ ಯಾವೊಂದು ಚಿತ್ರವೂ 500 ದಶಲಕ್ಷ ಡಾಲರ್ ಗಳಿಕೆಯ ಗಡಿ ಮುಟ್ಟಿರಲಿಲ್ಲ. ಆದರೆ ‘ಜುರಾಸಿಕ್ ವರ್ಲ್ಡ್’ ಆ ಅಭಿದಾನಕ್ಕೆ ಪಾತ್ರವಾಗಿರುವ ಟಾಪ್ 5 ಬ್ಲಾಕ್​ಬಸ್ಟರ್ ಚಿತ್ರಗಳಲ್ಲಿ ಮುಂಚೂಣಿಯಲ್ಲಿ ಸ್ಥಾನದಲ್ಲಿದೆ. ಹ್ಯಾರಿ ಪಾಟರ್ ಆಂಡ್ ದಿ ಡೆತ್​ಲಿ ಹಾಲೊಸ್ (483.2 ದಶಲಕ್ಷ ಡಾಲರ್), ಫ್ಯೂರಿಯಸ್ 7 (397.6 ದ.ಲ.ಡಾ.), ಹ್ಯಾರಿ ಪಾಟರ್ ಆಂಡ್ ಹಾಫ್-ಬ್ಲಡ್ ಪ್ರಿನ್ಸ್ (394 ದ.ಲ.ಡಾ.), ದ ಅವೆಂಜರ್ಸ್ (392.5 ದ.ಲ.ಡಾ.) ನಂತರದ ಸ್ಥಾನದಲ್ಲಿವೆ.

Write A Comment