ಮನೋರಂಜನೆ

ಅಜ್ಜಿಯಾಗಿ ಬಡ್ತಿ ಪಡೆದ ಹೇಮಾಮಾಲಿನಿ!

Pinterest LinkedIn Tumblr

hemal

ಮುಂಬೈ: ಖ್ಯಾತ ಅಭಿನೇತ್ರಿ, ಡ್ರೀಮ್ ಗರ್ಲ್ ಎಂದು ಕರೆಸಿಕೊಳ್ಳುವ ಹೇಮಾಮಾಲಿನಿಯವರ ಕಿರಿಯ ಮಗಳು ಅಹಾನಾ ಡಿಯೊಲ್ ವೊಹ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ
ತಾನು ಅಜ್ಜಿಯಾದ ಸಂತೋಷದ ಸಂಗತಿಯನ್ನು ಹೇಮಾಮಾಲಿನಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು, ತನಗೆ ಶುಭ ಹಾರೈಕೆಗಳನ್ನು ನೀಡಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

“ನಿಮ್ಮ ಶುಭಕಾಮನೆಗಳಿಗೆ ಧನ್ಯವಾದಗಳು. ಅಹಾನಾ ಗಂಡು ಮಗುವಿಗೆ ತಾಯಿಯಾಗಿದ್ದಾಳೆ. ನಮಗೆಲ್ಲರಿಗೂ ಅಮಿತಾನಂದವಾಗಿದೆ”, ಎಂದು ಧರ್ಮೇಂದ್ರ ಪತ್ನಿ ಟ್ವಿಟ್ ಮಾಡಿದ್ದಾರೆ.

ತಾಯಿ ಮಗು ಇಬ್ಬರು ಸ್ವಸ್ಥವಾಗಿದ್ದಾರೆ ಎಂದು ತಿಳಿದು ಬಂದಿದೆ. ಅಹಾನಾಳ ಹಿರಿಯ ಸಹೋದರಿ ಇಷಾ ಮಾರ್ಚ್‌ನಲ್ಲಿ ತನ್ನ ತಂಗಿಯ ಸೀಮಂತವನ್ನು ಹಮ್ಮಿಕೊಂಡಿದ್ದರು. ಬಾಲಿವುಡ್‌ನ ಹಲವು ಗಣ್ಯರು ಆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನೃತ್ಯಪಟು ಆಗಿರುವ ಅಹಾನಾ 2014 ಫೆಬ್ರವರಿಯಲ್ಲಿ  ದೆಹಲಿಯ ಉದ್ಯಮಿ ವೈಭವ ವೊಹ್ರಾರನ್ನು ಮದುವೆಯಾಗಿದ್ದರು.

Write A Comment