ಮನೋರಂಜನೆ

‘ನಿನ್ನ ಎದೆ ಸುಂದರ’ ಎಂದವನಿಗೆ ನಟಿ ಕೊಟ್ಟ ಉತ್ತರ; ಹುಟ್ಟು ಹಾಕಿದೆ ಚರ್ಚೆ

Pinterest LinkedIn Tumblr

19604769vishakha-singh

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಬಾಲಿವುಡ್ ನಟಿ ವಿಶಾಖಾ ಸಿಂಗ್ ಹಾಕಿದ್ದ ಫೋಟೋಗೆ ವಿಕೃತನೊಬ್ಬ ‘ನಿನ್ನ ಎದೆ ಸುಂದರ’ ಎಂಬ ಕಮೆಂಟ್ ಹಾಕಿದ್ದು, ಅದಕ್ಕೆ ತಕ್ಕ ಉತ್ತರರವನ್ನೂ ಈ ನಟಿ ನೀಡಿದ್ದರು. ಆದರೆ ಇದೀಗ ಈ ವಿಚಾರ ಈಗ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ತನ್ನ ಫೋಟೋಗೆ ಕಮೆಂಟ್ ಹಾಕಿದ್ದವನಿಗೆ ಫೇಸ್ ಬುಕ್ ನಲ್ಲೇ ದಿಟ್ಟ ಉತ್ತರ ನೀಡಿದ್ದ ನಟಿ ವಿಶಾಖಾ ಸಿಂಗ್ ಬಳಿಕ ಎಲ್ಲರೂ ಮಾಡುವಂತೆ ಆ ಅಶ್ಲೀಲ ಕಮೆಂಟ್ ಡಿಲಿಟ್ ಮಾಡಿ ತಮಗೆ ಬೆಂಬಲಿಸಿದವರಿಗೆ ಧನ್ಯವಾದ ತಿಳಿಸಿದ್ದರು. ವಿಶಾಖಾ ಸಿಂಗ್ ಮನೋವಿಕೃತನಿಗೆ ತಕ್ಕ ಶಾಸ್ತಿ ಮಾಡಿರುವುದಕ್ಕೆ ಬಹುತೇಕರು ಅಭಿನಂದಿಸಿದ್ದರಲ್ಲದೇ ಆ ಕಿಡಿಗೇಡಿ ವಿರುದ್ದ ನಟಿ ವಿಶಾಖಾ ಸಿಂಗ್ ಪೊಲೀಸರಿಗೆ ದೂರು ನೀಡಬೇಕಿತ್ತೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಆದರೆ ಇದಕ್ಕೆ ತಮ್ಮ ಸ್ವಯಂ ಅನುಭವ ಹೇಳಿಕೊಂಡಿರುವ ಕೆಲ ಯುವತಿಯರು, ಇಂತಹ ಕಮೆಂಟ್ ಮಾಡಿದವರ ವಿರುದ್ದ ತಾವು ದೂರು ಕೊಡಲು ಠಾಣೆಗೆ ತೆರಳಿದ್ದ ವೇಳೆ ಅಲ್ಲಿನ ಕೆಲ ಪೊಲೀಸರಿಗೆ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಕುರಿತು ಮಾಹಿತಿಯೇ ಇರಲಿಲ್ಲವೆಂದು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನದ ಕುರಿತು ಪೊಲೀಸರಿಗೆ ಮಾಹಿತಿಯೇ ಇಲ್ಲವೆಂದ ಮೇಲೆ ಅಂತವರು ಕಿಡಿಗೇಡಿಗಳ ವಿರುದ್ದ ಹೇಗೆ ಕ್ರಮ ಕೈಗೊಳ್ಳುತ್ತಾರೆಂದು ಪ್ರಶ್ನಿಸಿದ್ದಾರೆ. ಸೈಬರ್ ಕ್ರೈಂ ವಿಭಾಗ ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರವಿದ್ದು, ಅಲ್ಲಿಗೆ ಹೋಗಿ ದೂರು ಕೊಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಾಗೇ ಬಹಳಷ್ಟು ಯುವತಿಯರು ಇಂತಹ ಅಶ್ಲೀಲ ಕಮೆಂಟ್ ಬಂದ ವೇಳೆ ಅದನ್ನು ಡಿಲಿಟ್ ಮಾಡಿ ಅಂತಹ ಕಮೆಂಟ್ ಕಳುಹಿಸಿದವರನ್ನು ಬ್ಲಾಕ್ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ಯುವತಿ ತನ್ನ ಅನುಭವ ಹೇಳಿಕೊಂಡಿದ್ದು, ಇಂತಹ ಕಿಡಿಗೇಡಿಯೊಬ್ಬನನ್ನು ತಾವು ಬ್ಲಾಕ್ ಮಾಡಿದ ವೇಳೆ ಮತ್ತೊಂದು ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಆ ವಿಕೃತ ಮತ್ತದೆ ಕಾರ್ಯ ಮುಂದುವರೆಸಿದ್ದ. ಹೀಗಾಗಿ ತಾವು ಸಾಮಾಜಿಕ ಜಾಲ ತಾಣ ಉಪಯೋಗಿಸುವ ಕುರಿತು ಯೋಚಿಸುವಂತಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ನಟಿ ವಿಶಾಖಾ ಸಿಂಗ್ ಘಟನೆ ಬಳಿಕ ಸಾಮಾಜಿಕ ಜಾಲ ತಾಣದಲ್ಲಿ ಈ ಕುರಿತು ದೊಡ್ಡ ಮಟ್ಟದ ಚರ್ಚೆಯಂತೂ ನಡೆದಿದೆ.

Write A Comment