ರಾಷ್ಟ್ರೀಯ

ಕಾಶ್ಮೀರದಲ್ಲಿ ಹಾರಾಡಿದ ಪಾಕ್ ಹಾಗೂ ಉಗ್ರರ ಧ್ವಜ : ಪಾಕ್ ನ ಇಸಿಸ್ ಸಾಂಗತ್ಯ ಬಯಲು

Pinterest LinkedIn Tumblr

8350345855-265800-isis

ಉಗ್ರರ ದಮನಕ್ಕೆ ಭಾರತ ದೃಢ ಹೆಜ್ಜೆ ಇಡುತ್ತಿದ್ದಂತೆ ಕಾಶ್ಮೀರದ ಎರಡು ಕಡೆಗಳಲ್ಲಿ ಶುಕ್ರವಾರ ಇಸಿಸ್ ಉಗ್ರ ಸಂಘಟನೆ ಹಾಗೂ ಪಾಕಿಸ್ತಾನದ ಧ್ವಜ ಹಾರಿಸಿರುವುದು ಪತ್ತೆಯಾಗಿದ್ದು ಉಗ್ರ ಸಂಘಟನೆ ಜತೆಗೆ ಪಾಕ್ ಸಂಪರ್ಕ ಹೊಂದಿರುವುದು ಬಯಲಾದಂತಾಗಿದೆ.

ಕಳೆದ ಮಂಗಳವಾರ ಪ್ರತ್ಯೇಕವಾದಿಯೋರ್ವನನ್ನು ಮುಸುಕು ಧರಿಸಿದ್ದ ಬಂದೂಕು ದಾರಿಯೋರ್ವ ಹತ್ಯೆ ಮಾಡಿದ್ದ ಸ್ಥಳದಲ್ಲಿ ಇಂದು ಪ್ರತಿಭಟನೆ ನಡೆಸಲಾಗುತ್ತಿತ್ತು, ಇದೇ ಸ್ಥಳದಲ್ಲಿ ಈ ಎರಡೂ ಧ್ವಜಗಳು ಪತ್ತೆಯಾಗಿದ್ದು ಹಾಗಾಗಿ ಪ್ರತ್ಯೇಕವಾದಿಗಳ ಗುಂಪು ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ಜಾಮಿಯಾ ಮಸೀದಿಯಿಂದ ನೋವಟ್ಟಾ ಚೌಕದವರೆಗೆ ಮುಸುಕು ಧರಿಸಿದ್ದ ಯುವಕರ ಗುಂಪೊಂದು ಮೆರವಣಿಗೆ ನಡೆಸಿದ್ದು, ಈ ಯುವಕರ ಬಳಿ ಇಸ್ಲಾಮಿಕ್ ರಾಷ್ಟ್ರ ಧ್ವಜ ಹೋಲುವಂತಹ ಕಪ್ಪು ಬ್ಯಾನರ್​ಗಳಿದ್ದವು ಎನ್ನಲಾಗುತ್ತಿದ್ದು ಇಸಿಸ್ ಉಗ್ರರ ಜತೆ ಇವರ ಸಂಪರ್ಕ ಇರುವ ಸಾಧ್ಯತೆ ಹೆಚ್ಚಿದೆ ಎಂಬ ಅನುಮಾಕ್ಕೆ ಎಡೆ ಮಾಡಿಕೊಟ್ಟಿದೆ.

Write A Comment