ಮನೋರಂಜನೆ

ಮಾದಕ ನಗೆಯೇ ಮುಳುವಾಯ್ತು ಈ ನಟಿಗೆ !

Pinterest LinkedIn Tumblr

9791china-actor_647_061015081254---

ಮಾದಕ ಅಭಿನಯಕ್ಕೆ ಮನಸೋಲದ ಪಡ್ಡೆ ಹುಡುಗರು ಯಾರಿಲ್ಲ. ಅದರಲ್ಲಿಯೂ ನಟಿ ಮಣಿಯರು ಮಾದಕ ನಗೆ ಬೀರಿದರಂತೂ ಪಡ್ಡೆ ಹುಡುಗರ ಹೃದಯದಲ್ಲಿ ಅವರು ಫಿಕ್ಸ್.! ಆದರೆ ಇಲ್ಲೊಬ್ಬಳು ನಟಿಗೆ ಮಾದಕ ನೋಟ ಬೀರಿದ ಕಾರಣಕ್ಕೆ ಸಂಕಷ್ಟವೊಂದು ಎದುರಾಗಿದೆ.

ಹೌದು. ಚೀನಾದಲ್ಲಿ ಟಿವಿ ಕಾರ‌್ಯಕ್ರಮದಲ್ಲಿ ಮಾದಕ ನೋಟ ಬೀರಿದ ಖ್ಯಾತ ನಟಿ ಝಾವೊ ಅವರ ವಿರುದ್ದ ದೂರೊಂದು ದಾಖಲಾಗಿದ್ದು ಟಿವಿ ಕಾರ‌್ಯಕ್ರಮವೊಂದರಲ್ಲಿ ಮಾದಕ ನೋಟ ಬೀರಿ ಪ್ರೇಕ್ಷಕರಿಗೆ ಇರಿಸುಮುರಿಸು ಉಂಟಾಗುವಂತೆ ಮಾಡಿದ್ದಾರೆ ಎಂದು ಶಾಂಘೈ ಮೂಲದ ವ್ಯಕ್ತಿಯೊಬ್ಬ ಪ್ರಕರಣ ದಾಖಲಿಸಿದ್ದಾನೆ.

ಅಲ್ಲದೇ ತಾಯಿಲ್ಲದ ತನ್ನ ಮಗಳು ನಟಿ ಝಾವೊ ಅವರ ಸಿನಿಮಾ ನೋಡಿ ಪ್ರಭಾವಿತಳಾಗಿದ್ದು ಈ ನಟಿಯನ್ನು ತಾಯಿ ಸ್ಥಾನದಲ್ಲಿಟ್ಟು ಪೂಜ್ಯ ಭಾವನೆಯಿಂದ ನೋಡುತ್ತಿದ್ದಾಳೆ. ಆದರೆ ಝಾವೊ ಕಾರ‌್ಯಕ್ರಮದಲ್ಲಿ ಕೆಟ್ಟದಾಗಿ ನಡೆದುಕೊಂಡಿರುವುದು ಆಕೆಯ ಭಾವನೆಗೆ ದಕ್ಕೆ ತಂದಿದೆ ಎಂದು ತನ್ನ ದೂರಿನಲ್ಲಿ ಕಿಡಿ ಕಾರಿದ್ದಾನೆ.

ಒಂದೊಮ್ಮೆ ಈ ವಿಷಯವೇನಾದರೂ ಪಡ್ಡೆ ಹುಡುಗರ ಕಿವಿಗೆ ಬಿದ್ದಿದ್ದರೆ “ನಮ್ಮ ಪುಣ್ಯಕ್ಕೆ ಭಾರತದಲ್ಲಿ ಇಂತಹ ವ್ಯಕ್ತಿಗಳಿಲ್ಲ. ಇಲ್ಲದಿದ್ದರೆ ಸಿನಿಮಾ ಥಿಯೇಟರ್ ಗಳಿಗೆ ಬಾಗಿಲು ಹಾಕುತ್ತಿದ್ದರು” ಎಂದು ಸಂಭ್ರಮಿಸುತ್ತಿದ್ದರೋ ಏನೋ.!!

Write A Comment