
ಆರ್ ಚಂದ್ರು ಅವರ ನಿರ್ದೇಶನದಲ್ಲಿ ಅನೂಪ್ ನಟಿಸುತ್ತಿದ್ದಾರೆ. ಅನೂಪ್ ಯಾರು ಕನ್ನಡ ಚಿತ್ರರಂಗದಲ್ಲಿ ತುಂಬಾ ಅನೂಪ್ ಗಳಿದ್ದಾರೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಮಾಜಿ ಮಂತ್ರಿ ಹೆಚ್ ಎಂ ರೇವಣ್ಣ ಅವರ ಪುತ್ರ ಅನೂಪ್. ಅವರು ಈಗ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ.
ಅನೂಪ್ ಅವರ ಚಿತ್ರವನ್ನು ಚಾರ್ಮಿನಾರ್ ಚಂದ್ರು ಅವರು ನಿರ್ದೇಶನ ಮಾಡುತ್ತಾರೆ ಎನ್ನುವ ಹೊಸ ಬಿಸಿ ಸುದ್ದಿ ನಡುವೆ, ಆ ಚಿತ್ರದ ಶೀರ್ಷಿಕೆಯ ಬಗ್ಗೆ ಅದು ಎಂದು ಲಂಚ ಆಗುತ್ತದೆ, ಯಾರ್ಯಾರು ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎನ್ನುವ ಎಲ್ಲಾ ಪ್ರಶ್ನೆಗಳು ಹೊರ ಬಂದಿತ್ತು. ಅವುಗಳೆಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ. ಈ ಚಿತ್ರವನ್ನು ಖುದ್ದು ಮುಖ್ಯಮಂತ್ರಿಗಳೇ ಲಾಂಚ್ ಮಾಡಲಿದ್ದಾರಂತೆ. ಇದು ಜೂನ್ 12 ಲಾಂಚ್ ಆಗಲಿದೆ ಎನ್ನುವ ಸುದ್ದಿ ಹೊರ ಬಂದಿದೆ.
ಆರ್ ಚಂದ್ರು ಎನ್ನುವ ವಿಭಿನ್ನ ನಿರ್ದೇಶಕ ಅವರ ಕೈಕೆಳಗೆ ತಮ್ಮ ತೆರಂಗೇಟ್ರಂ ಮಾಡಲು ಸಿದ್ಧವಾಗಿರುವ ಅನೂಪ್ ಅವರ ಚಿತ್ರದ ಶೀರ್ಷಿಕೆ ಇನ್ನೂ ನಿಕ್ಕಿಯಾಗಿರಲಿಲ್ಲ. ಆದರೆ ಈಗ ಬಂದಿರುವ ಸುದ್ದಿ ಪ್ರಕಾರ ಅವರ ಹೊಸ ಚಿತ್ರಕ್ಕೆ ಲಕ್ಷ್ಮಣ ಎನ್ನುವ ಹೆಸರನ್ನು ನೀಡಲಾಗಿದೆ. ಆದರೆ ಲಾಂಚ್ ದಿನಾಂಕ ಮತ್ತು ಶೀರ್ಷಿಕೆ ಹೊರೆತು ಪಡಿಸಿ ಮತ್ತಿನ್ಯಾವ ಸಂಗತಿಗಳು ಸಹಿತ ಹೊರ ಬಂದಿಲ್ಲ.. ಆದರೆ ಬಡಾ ಬಾಪ್ ಕಾ ಬೇಟಾ ಅಂದ ಮೇಲೆ ಎಲ್ಲವೂ ದೊಡ್ದಾದಾಗಿಯೇ ಇರುತ್ತದೆ.