ರಾಷ್ಟ್ರೀಯ

ದತ್ತು ಪುತ್ರಿ ವಿವಾಹವನ್ನು ಮುಸ್ಲಿಂ ಸಂಪ್ರದಾಯದಂತೆ ನೆರವೇರಿಸಿದ ಹಿಂದೂ ಕುಟುಂಬ

Pinterest LinkedIn Tumblr

4315shaboo99

ಬಿಹಾರ್: ಜಾತಿ, ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಿರುವವರ ಮಧ್ಯೆ ಈ ಹಿಂದೂ ಕುಟುಂಬ ವಿಭಿನ್ನವಾಗಿದ್ದು, ತಾವು ದತ್ತು ಪಡೆದಿದ್ದ ಮುಸ್ಲಿಂ ಕುಟುಂಬದ ಯುವತಿಯ ವಿವಾಹವನ್ನು ಇಸ್ಲಾಮ್ ಧರ್ಮದ ಸಂಪ್ರದಾಯಕ್ಕನುಗುಣವಾಗಿ ನೆರವೇರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬಿಹಾರದ ಪೂರ್ನಿಯಾ ಜಿಲ್ಲೆಯ ಉಪೇಂದ್ರ ಗುಪ್ತಾ ಎಂಬವರು ತಂದೆ- ತಾಯಿಯನ್ನು ಕಳೆದುಕೊಂಡಿದ್ದ ನಾಲ್ಕು ವರ್ಷದ ಶಬ್ಬೂ ಎಂಬ ಹೆಣ್ಣು ಮಗುವನ್ನು 20 ವರ್ಷಗಳ ಹಿಂದೆ ದತ್ತು ಪಡೆದಿದ್ದರು. ಆಕೆ ಹಿಂದೂ ಕುಟುಂಬದಲ್ಲಿ ಬೆಳೆಯುತ್ತಿದ್ದರೂ ದತ್ತು ಪುತ್ರಿಯೊಂದಿಗೆ ಹಿಂದೂ ಹಾಗೂ ಮುಸ್ಲಿಂ ಧರ್ಮದ ಹಬ್ಬಗಳನ್ನು ಉಪೇಂದ್ರ ಗುಪ್ತಾ ಕುಟುಂಬ ಆಚರಿಸುತ್ತಿತ್ತು.

ಶಬ್ಬೂ ಪ್ರಾಪ್ತ ವಯಸ್ಕಳಾಗುತ್ತಿದ್ದಂತೆಯೇ ಮುಸ್ಲಿಂ ಧರ್ಮದ ಯುವಕನೊಂದಿಗೆ ಆಕೆಯ ವಿವಾಹವನ್ನು ಸಂಪ್ರದಾಯಕ್ಕನುಗುಣವಾಗಿ ನೆರವೇರಿಸಿರುವ ಉಪೇಂದ್ರ ಗುಪ್ತಾ ಕೋಮು ಸಾಮರಸ್ಯ ಮೆರೆದಿದ್ದಾರೆ. ಈ ವಿವಾಹಕ್ಕೆ ಹಿಂದೂ ಹಾಗೂ ಮುಸ್ಲಿಂ ಧರ್ಮದವರಿಬ್ಬರು ಆಗಮಿಸಿ ನೂತನ ವಧು- ವರರನ್ನು ಅಶೀರ್ವದಿಸಿದ್ದಾರಲ್ಲದೇ ಉಪೇಂದ್ರ ಗುಪ್ತಾರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Write A Comment