ಅಂತರಾಷ್ಟ್ರೀಯ

ವಿಶ್ವದ ಅತಿ ದೊಡ್ಡ ಫೋಟೋ ಇಲ್ಲಿದೆ ನೋಡಿ !

Pinterest LinkedIn Tumblr

699004mont2

ಯುರೋಪಿನ ಆಲ್ಫ್ಸ್ ಪರ್ವತದ ಮೇಲೆ ತೆಗೆದಿರುವ ಈ ಫೋಟೋ ವಿಶ್ವದ ಅತಿ ದೊಡ್ಡ ಫೋಟೋಗ್ರಫಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದನ್ನು ಪ್ರಿಂಟ್ ಹಾಕಿದರೆ ಒಂದು ಸಾಕರ್ ಮೈದಾನದಷ್ಟು ದೊಡ್ಡದಾಗಿರುತ್ತದೆ ಎಂದು ಹೇಳಲಾಗಿದೆ.

ಖ್ಯಾತ ಫೋಟೋಗ್ರಾಫರ್ ಫಿಲಿಪೋ ನೇತೃತ್ವದ ಅಂತರಾಷ್ಟ್ರೀಯ ಫೋಟೋಗ್ರಾಫರ್ ಗಳ ತಂಡ ಮೈ ಮರಗಟ್ಟುವ -14 ಡಿಗ್ರಿ ಚಳಿಯಲ್ಲಿ ಸತತ ಎರಡು ವಾರಗಳ ಕಾಲ ಆಲ್ಫ್ಸ್ ಪರ್ವತದ ತುತ್ತ ತುದಿಯಲ್ಲಿ ಕಳೆದು ಇಂತದೊಂದು ಸುಂದರ ಫೋಟೋ ಹೊರ ಬರಲು ಕಾರಣವಾಗಿದೆ.

ಈ ಮೊದಲು 2012 ರಲ್ಲಿ ಲಂಡನ್ ನಲ್ಲಿ ತೆಗೆದಿದ್ದ ಬಿಟಿ ಟವರ್ ನ ಫೋಟೋವೇ ದೊಡ್ಡದೆಂದು ಪರಿಗಣಿಸಲಾಗಿದ್ದು, ಈಗ ಫೋಟೋಗ್ರಾಫರ್ ಫಿಲಿಪೋ ಮತ್ತವರ ತಂಡ ಆಲ್ಫ್ಸ್ ಪರ್ವತದ ಮೇಲೆ ತೆಗೆದಿರುವ ಫೋಟೋ ಆ ದಾಖಲೆಗೆ ಭಾಜನವಾಗಿದೆ. ಈ ತಂಡ ತೆಗೆದಿರುವ ಫೋಟೋಗಳನ್ನು in2white.com ವೆಬ್ ಸೈಟಿನಲ್ಲಿ ಹಾಕಲಾಗಿದ್ದು, ಅಲ್ಲಿ ವೀಕ್ಷಿಸಬಹುದಾಗಿದೆ.

Write A Comment