ಖ್ಯಾತ ತಾರೆಗಳನ್ನೊಳಗೊಂಡ ‘ದಿಲ್ ಧಡ್ಕನೇ ದೋ’ ಚಿತ್ರ ಬಿಡುಗಡೆಗೊಂಡು ಭರ್ಜರಿ ಯಶಸ್ಸನ್ನು ಕಾಣುತ್ತಿದೆ. ಈ ಚಿತ್ರವನ್ನು ಎರಡು ಬಾರಿ ನೋಡಿರುವ ಖ್ಯಾತ ಬಾಲಿವುಡ್ ನಟರೊಬ್ಬರು ಟರ್ಕಿ ದೇಶದ ಸೌಂದರ್ಯಕ್ಕೆ ಮಾರು ಹೋಗಿದ್ದು, ತಮ್ಮ ಮುಂದಿನ ಚಿತ್ರವನ್ನು ಅಲ್ಲಿಯೇ ಚಿತ್ರೀಕರಿಸಲು ತೀರ್ಮಾನಿಸಿದ್ದಾರೆ.
ಬಾಲಿವುಡ್ ನ ಮಿಸ್ಟರ್ ಪರ್ಫಕ್ಷನೆಸ್ಟ್ ಅಮೀರ್ ಖಾನ್ ‘ದಿಲ್ ಧಡ್ಕನೇ ದೋ’ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದು, ಜೋಯಾ ಅಖ್ತರ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ ಬಳಿಕ ಎರಡು ಬಾರಿ ನೋಡಿರುವ ಅಮೀರ್ ಚಿತ್ರ ಕಥೆಗೆ ಮನ ಸೋತಿದ್ದಾರೆ. ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಮೀರ್ ಖಾನ್ ಮನಸಾರೆ ಹೊಗಳಿದ್ದಾರೆ. ಅಲ್ಲದೇ ಟರ್ಕಿಯನ್ನು ಈ ಚಿತ್ರದಲ್ಲಿ ನೋಡಿದ ಬಳಿಕ ಅಲ್ಲಿಗೆ ತೆರಳುವುದಾಗಿಯೂ ಅಮೀರ್ ಘೋಷಿಸಿದ್ದಾರೆ.
ಜೋಯಾ ಅಖ್ತರ್ ನಿರ್ದೇಶನದ ‘ದಿಲ್ ಧಡ್ಕನೇ ದೋ’ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಾಮ ನಟರಾದ ಫರ್ಹಾನ್ ಅಖ್ತರ್, ಅನಿಲ್ ಕಪೂರ್, ರಣವೀರ್ ಸಿಂಗ್, ಅನುಷ್ಕಾ ಶರ್ಮಾ, ಪ್ರಿಯಾಂಕಾ ಛೋಪ್ರಾ ಮೊದಲಾದವರು ನಟಿಸಿದ್ದು, ಚಿತ್ರದ ಕುರಿತು ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಕಳೆದ ಶುಕ್ರವಾರ ಬಿಡುಗಡೆಯಾದ ಈ ಚಿತ್ರ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.
