ಮನೋರಂಜನೆ

ಲಾಟರಿ ಆಸೆಗೆ ಬಿದ್ದು ಹಣ ಕಳೆದುಕೊಂಡ ಬಾಲಿವುಡ್ ನಟ..!

Pinterest LinkedIn Tumblr

lot

ಆನ್ ಲೈನ್ ಲಾಟರಿ ಮೋಸಕ್ಕೆ ಮುಗ್ದರು ಬಲಿಯಾಗುವುದು ಸಾಮಾನ್ಯ ಸಂಗತಿ. ಆದರೆ ಬಾಲಿವುಡ್ ನಟರೊಬ್ಬರು ಆನ್ ಲೈನ್ ಲಾಟರಿ ಮೋಸದ ಜಾಲಕ್ಕೆ ಬಲಿಯಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಸುದ್ದಿ ಇಲ್ಲಿದೆ ನೋಡಿ.

‘ಅಲೋನ್’ ಚಿತ್ರದ ನಟ ಕರಣ್ ಸಿಂಗ್ ಗ್ರೋವರ್ ಅವರ ಇ ಮೇಲ್ ಗೆ ನಿಮಗೆ ಕೋಟ್ಯಾಂತರ ರೂ. ಬಹುಮಾನ ಲಾಟರಿಯಲ್ಲಿ ಲಭಿಸಿದೆ ಎಂಬ ಸಂದೇಶ ಬಂದಿದೆ. ಇದನ್ನು ನಂಬಿದ ಈ ನಟ ಅವರು ಕೇಳಿದ್ದ ಮಾಹಿತಿಗಳನ್ನೆಲ್ಲಾ ನೀಡಿದ್ದಾರೆ. ಬಳಿಕ ಮತ್ತೊಂದು ಸಂದೇಶ ಬಂದಿದ್ದು, ನಿಮ್ಮ ಬಹುಮಾನದ ಮೊತ್ತ ಪಡೆಯಲು ಸ್ವಲ್ಪ ಹಣ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಅದರಂತೆ ಕರಣ್ ಸಿಂಗ್ ಗ್ರೋವರ್ 5.60 ಲಕ್ಷ ರೂ.ಗಳನ್ನು ಅವರು ಸೂಚಿಸಿದ ಖಾತೆಗೆ ಹಾಕಿದ್ದು, ಬಳಿಕ ವಂಚಕರು ಸಂಪರ್ಕ ಸಾಧಿಸುವ ಗೋಜಿಗೆ ಹೋಗಿಲ್ಲ. ಕರಣ್ ಸಿಂಗ್ ಗ್ರೋವರ್ ಪದೇ ಪದೇ ಇ ಮೇಲ್ ಕಳುಹಿಸಿದರೂ ಅದಕ್ಕೆ ಯಾವುದೇ ಉತ್ತರ ಬಂದಿಲ್ಲ. ಇದೀಗ ಹಣ ಕಳೆದುಕೊಂಡಿರುವ ಕರಣ್ ಸಿಂಗ್ ಗ್ರೋವರ್ ಮುಂಬೈ ಪೊಲೀಸರ ಮೊರೆ ಹೋಗಿದ್ದಾರೆ. ಆನ್ ಲೈನ್ ವಂಚಕರ ಕುರಿತಂತೆ ಆಗಾಗ್ಗೆ ವರದಿಗಳು ಪ್ರಕಟವಾಗುತ್ತಿದ್ದರೂ ಕರಣ್ ಸಿಂಗ್ ಗ್ರೋವರ್ ಅಮಾಯಕರಂತೆ ಟೋಪಿ ಹಾಕಿಸಿಕೊಂಡಿರುವುದಕ್ಕೆ ಬಾಲಿವುಡ್ ಮಂದಿ ಮುಸಿ ಮುಸಿ ನಗುತ್ತಿದ್ದಾರಂತೆ.

Write A Comment