ರಾಷ್ಟ್ರೀಯ

ಅತ್ಯಾಚಾರ ನಡೆಯುವುದು ಗಂಡು-ಹೆಣ್ಣಿನ ಪರಸ್ಪರ ಸಮ್ಮತಿಯಿಂದ; ಉತ್ತರ ಪ್ರದೇಶದ ಸಚಿವ ತೋತಾರಾಮ್ ಯಾದವ್ ವಿವಾದಾತ್ಮಕ ಹೇಳಿಕೆ

Pinterest LinkedIn Tumblr

6039totaram_650x400_81433618947

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಉತ್ತರ ಪ್ರದೇಶದ ಸಚಿವ ತೋತಾರಾಮ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ಅತ್ಯಾಚಾರ ನಡೆಯುವುದು ಗಂಡು-ಹೆಣ್ಣಿನ ಪರಸ್ಪರ ಸಮ್ಮತಿಯಿಂದ ಹೊರತು ಇದರಲ್ಲಿ ಯಾರದೇ ಒಬ್ಬರ ಮಾನಸಿಕ ಸ್ಥಿತಿಯಲ್ಲ ಎಂದು ವಿವರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವುದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ತೋತಾರಾಮ್ ಯಾದವ್, ರೇಪ್ ಅಂದರೇನು ಎಂದು ಪ್ರಶ್ನಿಸಿದರಲ್ಲದೇ ಅತ್ಯಾಚಾರ ನಡೆಯುವುದು ಸಾಮಾನ್ಯವಾಗಿ ಗಂಡು- ಹೆಣ್ಣಿನ ಪರಸ್ಪರ ಒಪ್ಪಿಗೆಯಿಂದ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಅತ್ಯಾಚಾರದಲ್ಲಿ ಎರಡು ಬಗೆಯಿದ್ದು ಒಂದು ಒತ್ತಾಯಪೂರ್ವಕ ಅತ್ಯಾಚಾರವಾದರೆ ಮತ್ತೊಂದು ಪರಸ್ಪರ ಒಪ್ಪಿಗೆಯ ಮೂಲಕ ನಡೆಯುತ್ತದೆ ಎನ್ನುವ ಮೂಲಕ ಚರಚೆಗೆ ಗ್ರಾಸವಾಗಿದ್ದಾರೆ. ಅಲ್ಲದೇ ಸಚಿವರ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಸಚಿವ ಸ್ಥಾನದಲ್ಲಿರುವವರು ಜವಾಬ್ದಾರಿಯುತ ಹೇಳಿಕೆ ನೀಡಬೇಕು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Write A Comment