ರಾಷ್ಟ್ರೀಯ

ಗ್ರಾಹಕರಿಗೆ ಶಾಕ್ ನೀಡಿದ ಏರ್ ಟೆಲ್ ಡೇಟಾ ಪ್ಯಾಕ್ !

Pinterest LinkedIn Tumblr

7493AIRTEL_2430898f

ಮೊಬೈಲ್ ಗಳಲ್ಲಿ ಇಂಟರ್ನೆಟ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಭಾರತದ ಅಗ್ರಗಣ್ಯ ಮೊಬೈಲ್ ಸಂಸ್ಥೆ ಏರ್ ಟೆಲ್ ತನ್ನ 2 ಜಿ ಹಾಗೂ 3 ಜಿ ಡೇಟಾ ಪ್ಯಾಕ್ ಗಳ ಬೆಲೆಯಲ್ಲಿ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ತರಂಗಾಂತರ ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಂದೊಂದೇ ಕಂಪನಿಗಳು ತನ್ನ ದರದಲ್ಲಿ ಹೆಚ್ಚಳ ಮಾಡುತ್ತಿದ್ದು, ಮೊದಲ ಹಂತದಲ್ಲಿ ಏರ್ ಟೆಲ್, ಆನ್ ಲೈನ್ ಮೂಲಕ ಪ್ರೀ ಪೇಯ್ಡ್ ಡೇಟಾ ರೀ ಚಾರ್ಜ್ ಮಾಡುತ್ತಿದ್ದ ಗ್ರಾಹಕರಿಗೆ ನೀಡುತ್ತಿದ್ದ ಡಿಸ್ಕೌಂಟ್ ಅನ್ನು ತಕ್ಷಣದಿಂದ ತೆಗೆದು ಹಾಕಿದೆ.

ಆನ್ ಲೈನ್ ಮೂಲಕ ಪ್ರೀ ಪೇಯ್ಡ್ ಡೇಟಾ ರೀ ಚಾರ್ಜ್ ಮಾಡುತ್ತಿದ್ದವರಿಗೆ ಇದುವರೆಗೂ 30 ದಿನಗಳಿಗೆ ನೀಡುತ್ತಿದ್ದ 199 ರೂ.ಗಳಿಗೆ 2 ಜಿ ಯ 2 ಜಿ.ಬಿ. ಡೇಟಾವನ್ನು ಇದೇ ಮೊತ್ತಕ್ಕೆ ಕೇವಲ 1.25 ಜಿ.ಬಿ. ಡೇಟಾವನ್ನು 28 ದಿನಗಳ ಬಳಕೆಗೆ ಸೀಮಿತಗೊಳಿಸಲಾಗಿದೆ. 249 ರೂ.ಗಳಿಗೆ 1 ಜಿ.ಬಿ. 3 ಜಿ ಡೇಟಾವನ್ನು 30 ದಿನಗಳ ಬಳಕೆಗೆ ನೀಡುತ್ತಿದ್ದನ್ನು ಈಗ 255 ರೂ.ಗಳಿಗೆ ನಿಗದಿಪಡಿಸಲಾಗಿದೆ. ಕಳೆದ ವಾರ ಐಡಿಯಾ ತನ್ನ ಡೇಟಾ ಪ್ಯಾಕ್ ದರವನ್ನು ಏರಿಕೆ ಮಾಡಿದ್ದು, ಈಗ ಏರ್ ಟೆಲ್ ಸಹ ಈ ಸಾಲಿಗೆ ಸೇರಿದೆ. ಮುಂದಿನ ದಿನಗಳಲ್ಲಿ ವಿವಿಧ ಕರೆ ದರಗಳಲ್ಲೂ ಕೊಂಚ ಏರಿಕೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ.

Write A Comment