ಮನೋರಂಜನೆ

ಹೀರೋಗಳ ಪತ್ನಿಯರಿಗೆ ನನ್ನನ್ನು ಕಂಡರೆ ಭಯ; ನಾನು ಏನ್ ಮಾತನಾಡಿದ್ದರೂ ಸುದ್ದಿಯೇ: ಸನ್ನಿಲಿಯೋನ್

Pinterest LinkedIn Tumblr

sunny leon

ಮುಂಬೈ: ನನ್ನ ಜೊತೆ ನಟಿಸುವ ಹೀರೋಗಳು, ನಟರ ಪತ್ನಿಯರು ಸ್ವಲ್ಪ ಇನ್‍ಸೆಕ್ಯೂರ್ ಫೀಲ್ ಮಾಡುತ್ತಾರೆ ಎಂದು ನೀಲಿ ಚಿತ್ರಗಳ ತಾರೆ ಸನ್ನಿಲಿಯೋನ್ ಹೇಳಿಕೊಂಡಿದ್ದಾಳೆ. ಬಾಲಿವುಡ್‍ನ ಟಾಪ್ 5 ಪ್ರೊಡಕ್ಷನ್ ಸಂಸ್ಥೆ ಹೊರತುಪಡಿಸಿ ಮಿಕ್ಕೆಲ್ಲರಿಗೂ ನನ್ನ ಅಗತ್ಯವಿದೆ ಎಂದು ಸನ್ನಿ ಹೇಳಿದ್ದಾಳೆ.

ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಸನ್ನಿ ತನ್ನ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾಳೆ. “ನಾನು ಏನ್ ಮಾತನಾಡಿದ್ದರೂ ಸುದ್ದಿಯೇ. ನನ್ನ ಬಗ್ಗೆ ಮೂಗು ಮುರಿಯುವವರು, ಕೇಸ್ ಹಾಕುವವರು ಹೆಚ್ಚು ಇದ್ದರೂ ಆಕೆ ಏನನ್ನು ಮಾತನಾಡುತ್ತಾಳೆ ಎಂದು ಕೇಳುವ ಕುತೂಹಲ ಇರುವವರು ದುಪ್ಪಟ್ಟು ಇದ್ದಾರೆ” ಎಂದು ಸನ್ನಿ ತಿಳಿಸಿದ್ದಾಳೆ.

“ನನ್ನ ಜೊತೆ ನಟಿಸುವವರ ಪತ್ನಿಯರು ಸ್ವಲ್ಪ, ಭಯ ಮತ್ತು ಇನ್‍ಸೆಕ್ಯೂರ್ ಫೀಲ್ ಮಾಡ್ತಾರೆ. ನನ್ನ ಜೊತೆ ನಟಿಸಿರುವ ನಟರ ಪೈಕಿ ಹೆಚ್ಚಿನವರು ಮದುವೆಯಾಗಿರುವವರು. ಅವರ ಪತ್ನಿಯರು ನನ್ನ ಜೊತೆ ಗೆಳತನದಿಂದರೂ ಅವರು ಇನ್‍ಸೆಕ್ಯೂರ್ ಫೀಲ್ ಮಾಡೋದನ್ನ ಗಮನಿಸಿದ್ದೇನೆ” ಎಂದು ಸನ್ನಿ ಹೇಳಿದ್ದಾಳೆ.

“ಯಾರೋ ಹೆದರು ಅಗತ್ಯವಿಲ್ಲ. ಇಡೀ ಜಗತ್ತೇ ಹೊಟ್ಟೆಕಿಚ್ಚುಪಡುವಷ್ಟು ಒಳ್ಳೆಯವನು ನನ್ನ ಗಂಡ ಡೇನಿಯಲ್. ನನಗೆ ಮತ್ಯಾವ ಬಾಯ್‍ಫ್ರೆಂಡು, ಪತಿಯೂ ಅಗತ್ಯವಿಲ್ಲ” ಎನ್ನುವ ಮೂಲಕ ಬಾಲಿವುಡ್ ನಟರ ಪತ್ನಿಯರಿಗೆ ಸನ್ನಿ ಅಭಯ ನೀಡಿದ್ದಾಳೆ.

ನನ್ನ ಮೇಲೆ ಕೇಸ್ ಮೇಲೆ ಕೇಸ್ ಹಾಕುತ್ತಿರುವುದು ಹಿಂಸೆ ಅನಿಸಿದರೂ ಭಾರತ ಚೆನ್ನಾಗಿದೆ ಅಂದಿರುವ ಸನ್ನಿಲಿಯೋನ್, ಬಾಲಿವುಡ್‍ನ ಟಾಪ್ 5 ಪ್ರೊಡಕ್ಷನ್ ಸಂಸ್ಥೆಗಳು ಮಾತ್ರ ಅವರ ಚಿತ್ರಗಳಲ್ಲಿ ನನ್ನ ಬಳಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಆದರೆ ಬಾಲಿವುಡ್‍ನಲ್ಲಿ ಬೆಳೆಯುವ, ಗುರುತಿಸಿಕೊಳ್ಳುವವರ ಚಿತ್ರಗಳಲ್ಲಿ ನನ್ನನ್ನು ಬಳಸಿಕೊಳ್ಳಲು ಪೈಪೋಟಿ ಇದೆ ಎನ್ನುವ ಮೂಲಕ ಬೇಸರ – ಖುಷಿ ಎರಡನ್ನೂ ಹೇಳಿಕೊಂಡಿದ್ದಾಳೆ ಸನ್ನಿಲಿಯೋನ್.

ಏಕ್ ಪೆಹಲಿ ಲೀಲಾ ನಿರೀಕ್ಷಿತ ಯಶಸ್ಸು ಕೊಡದೇ ಇದ್ದರೂ ನಾನು ನಟಿಸಬಲ್ಲೆ ಎಂಬುದನ್ನೂ ತೋರಿಸಿಕೊಟ್ಟಿದೆ. ಒಳ್ಳೊಳ್ಳೆ ಅವಕಾಶ ಸಿಗುತ್ತಿದೆ. ಇವುಗಳನ್ನು ಬಳಸಿ ಉತ್ತಮ ನಟಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

Write A Comment