ಮನೋರಂಜನೆ

ಟ್ವಿಟ್ಟರ್‌ನಲ್ಲೂ ಅಮಿತಾಬ್ ಬಿಗ್‌ಬಾಸ್; 1.5 ಕೋಟಿ ಮಂದಿ ಟ್ವಿಟ್ಟರ್ ಹಿಂಬಾಲಕರು

Pinterest LinkedIn Tumblr

amithba

ಮುಂಬಯಿ, ಜೂ.2: ಬಾಲಿವುಡ್’ನ ಬಿಗ್ ಬಿ ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ಈಗ ಅಮಿತಾಬ್!

ಹೌದು. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ 1.5 ಕೋಟಿ ಮಂದಿ ಟ್ವಿಟ್ಟರ್ ಹಿಂಬಾಲಕರಿದ್ದಾರೆ. ಇಷ್ಟೊಂದು ಮಂದಿ ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ಬಾಲಿವುಡ್‌ನ ಮೊದಲ ನಟ ಬಿಗ್ ಬಿ.

ಇದರ ನಂತರದ ಸ್ಥಾನಗಳು ಶಾರುಖ್ ಖಾನ್‌ಗೆ 1.3 ಕೋಟಿ, ಸಲ್ಮಾನ್ ಖಾನ್‌ಗೆ 1.2 ಕೋಟಿ, ಪ್ರಿಯಾಂಕ ಚೋಪ್ರಾಗೆ 90.81 ಲಕ್ಷ ಟ್ವಿಟ್ಟರ್ ಹಿಂಬಾಲಕರಿದ್ದಾರೆ.

ಬಚ್ಚನ್ 2010ರ ಮೇ ನಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದು, ಅಭಿಮಾನಿಗಳ ಜತೆ ಸಂವಾದ ನಡೆಸುತ್ತಾರೆ. ಈವರೆಗೆ ಅವರು 41.6 ಸಾವಿರ ಟ್ವೀಟ್ ಮಾಡಿದ್ದಾರೆ.

Write A Comment