ಮನೋರಂಜನೆ

ಸೆಕ್ಸ್ ಕ್ವೀನ್ ಸನ್ನಿ ಲಿಯೋನ್‌ಳ ವಿರುದ್ಧ ಕಿಡಿಕಾರಿದ ಬಾಲಿವುಡ್ ಐಟಂ ಕ್ವೀನ್ ರಾಖಿ ಸಾವಂತ್

Pinterest LinkedIn Tumblr

sunny-rakhi

ಬಾಲಿವುಡ್‌ನ ಹಾಟ್ ಬೆಡಗಿ, ಇಂಡೊ-ಕೆನಡಿಯನ್ ಸುಂದರಿ ಸನ್ನಿ ಲಿಯೋನ್‌ಳ ವಿರುದ್ಧ ಮತ್ತೊಬ್ಬ ಹಾಟೆಸ್ಟ್ ಬೆಡಗಿ ಮತ್ತು ಪಾರ್ಟ್ ಟೈಂ ರಾಜಕಾರಣಿ ರಾಖಿ ಸಾವಂತ್ ಕಿಡಿಕಾರಿದ್ದಾರೆ. ಈ ರಾಖಿ ಹೀಗೆ ಕಿಡಿಕಾರಿಕೊಳ್ಳಲು ಕಾರಣ ಸನ್ನಿ ಲಿಯೋನ್ ಎಂಬ ತುಂಟಿ ಅಂತರ್ಜಾಲದಲ್ಲಿ ನೃತ್ಯಗಾತಿಯರ ಹಾಟ್ ಚಿತ್ರಗಳನ್ನು ಅಪ್‌ಲೋಡ್ ಮಾಡಿರುವುದಂತೆ.

ನಾನು ಆ ನೃತ್ಯದ ಸಂದರ್ಭ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಟ್ಟೆ ಹಾಕಿಕೊಳ್ಳುವಂತೆ ನನ್ನ ಮೇಲೆ ಬಲವಂತದ ಒತ್ತಡ ಹೇರಲಾಗಿತ್ತು. ನನ್ನೊಬ್ಬಳಿಗೆ ಮಾತ್ರವಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ನಟಿಯರಿಗೂ ಇದೇ ರೀತಿ ಒತ್ತಡ ಹೇರಿದ್ದರು. ನಾವು ಅವರ ಒತ್ತಡಕ್ಕೆ ಮಣಿದು ಹಾಗೇ ಕನಿಷ್ಠ ವಸ್ತ್ರದಲ್ಲೇ ಕುಣಿಯಬೇಕಾಯಿತು ಎಂದು ರಾಖಿ ಎಂಬ ಗೌರಮ್ಮ ಆಕ್ರೋಶ ಹೊರಹಾಕಿದ್ದಾಳೆ.

ಆ ಕಾರಣಕ್ಕಾಗಿಯೇ ಸನ್ನಿಯನ್ನು ದೇಶ ಬಿಟ್ಟು ಹೊರಹಾಕಬೇಕು ಎಂಬುದು ರಾಖಿಯ ಆಗ್ರಹವಾಗಿದೆ. ನಟಿಯರೆಲ್ಲ ಕನಿಷ್ಠ ಉಡುಗೆ ತೊಡಲು ಹೇಳಿದ್ದು ಆ ನೀಲಿ ರಾಣಿಯೇ ಎನ್ನುತ್ತಾಳೆ ರಾಖಿ.

Write A Comment