ರಾಷ್ಟ್ರೀಯ

ವೆಚ್ಚ ಕಡಿತದ ಕ್ರಮ; ಜೆಟ್ ಏರ್‍ವೇಸ್ ನ 50 ಪೈಲಟ್‍ಗಳ ವಜಾ

Pinterest LinkedIn Tumblr

Jet_Airways

ನವದೆಹಲಿ: ವೈಮಾನಿಕ ಸಂಸ್ಥೆ ಜೆಟ್ ಏರ್‍ವೇಸ್ ತನ್ನ 50 ಮಂದಿ ಪೈಲಟ್ ಗಳನ್ನು ವಜಾ ಮಾಡಿದೆ.

ಈ ಮೂಲಕ ಜೆಟ್‍ನ ಪೈಲಟ್‍ಗಳ ಸಂಖ್ಯೆ 88ಕ್ಕಿಳಿದಂತಾಗಿದೆ. ವೆಚ್ಚ ಕಡಿತದ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 50 ಮಂದಿ ಪೈಲಟ್‍ಗಳ ಒಪ್ಪಂದವನ್ನು ಅವಧಿಗೆ ಮುನ್ನವೇ ಸಮಾಪ್ತಿಗೊಳಿಸಿದ್ದೇವೆ. ಜತೆಗೆ, ಅವರಿಗೆ ಒಪ್ಪಂದದ ಪ್ರಕಾರ, ಸ್ವಲ್ಪಮಟ್ಟಿಗಿನ ಪರಿಹಾರವನ್ನೂ ಒದಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದೇ ವೇಳೆ, ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಮಲೇಷ್ಯಾ ಏರ್ ಲೈನ್ಸ್ ಸಂಸ್ಥೆಯು ತನ್ನ 20 ಸಾವಿರ ನೌಕರರನ್ನು ವಜಾ ಮಾಡಿದೆ. 2018ರ ವೇಳೆಗೆ ಮಲೇಷ್ಯಾ ಏರ್ ಲೈನ್ಸ್ ಸಂಸ್ಥೆಯನ್ನು ಲಾಭಾದಾಯಿಕ ವೈಮಾನಿಕ ಸಂಸ್ಥೆಯನ್ನಾಗಿ ಬದಲಾಯಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ.

Write A Comment