ಬಾಲಿವುಡ್ ನಟಿ ಸನ್ನಿ ಲಿಯೋನ್ ನಟನೆಯ ‘ಮಸ್ತಿಜ್ಯಾದೆ’ ಚಲನಚಿತ್ರ ಈ ವರ್ಷದ ಅತ್ಯುತ್ತಮ ಸೆಕ್ಸ್-ಹಾಸ್ಯಚಿತ್ರಗಳಲ್ಲೊಂದು ಎಂಬ ನಿರೀಕ್ಷೆಯಲ್ಲಿ ಜನಪ್ರಿಯವಾಗಿ ಮೇ ೨೦೧೫ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ ಸೆನ್ಸಾರ್ ಮಂಡಲಿ ಸಿನೆಮಾಗೆ ಇನ್ನೂ ಒಪ್ಪಿಗೆ ನೀಡಲು ಮನಸ್ಸು ಮಾಡಿಲ್ಲ. ನಂತರ ಸಿನೆಮಾ ತಂಡ ಸೆನ್ಸಾರ್ ಮಂಡಲಿಯ ವಿರುದ್ಧ ನ್ಯಾಯಮಂಡಲಿಗೆ ದೂರು ಕೂಡ ನೀಡಿತ್ತು.
ಸಿನೆಮಾದಲ್ಲಿ ಅತಿ ಹೆಚ್ಚು ಸೆಕ್ಸ್ ದೃಶ್ಯ ಮಿಳಿತವಾಗಿದೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಲಿ ಸಿನೆಮಾಗೆ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು.ಈ ನಿರಾಕರಣೆಯ ನಂತರ ಸೆನ್ಸಾರ್ ಮಂಡಲಿಯ ಪರಿವೀಕ್ಷಣಾ ಸಮಿತಿಗೂ ಮತ್ತೊಮ್ಮೆ ಈ ಸಿನೆಮಾವನ್ನು ಸಲ್ಲಿಸಲಾದರೂ, ಅಲ್ಲಿಯೂ ಕೂಡ ಸಿನೆಮಾದಲ್ಲಿ ಸಾರ್ವಜನಿಕರಿಗೆ ಮುಜುಗರ ತರುವಂತಹ ದೃಶ್ಯಗಳಿವೆ ಎಂದು ತಿರಸ್ಕೃತಗೊಂಡಿತ್ತು.
ನಂತರ ಹಲವಾರು ಕಡೆ ಕತ್ತರಿ ಹಾಕಿದರೆ ಸಿನೆಮಾವನ್ನು ತೇರ್ಗಡೆ ಮಾಡಲು ಸೆನ್ಸಾರ್ ಮಂಡಲಿ ಒಪ್ಪಿಕೊಂಡರೂ, ಸಿನೆಮಾವನ್ನು ಅಷ್ಟು ಕತ್ತರಿಸಲು ಸಿನೆಮಾ ತಂಡ ಒಪ್ಪದೇ ಜಟಾಪಟಿ ಪ್ರಾರಂಭವಾಗಿತ್ತು. ಇದು ಮುಂದೆ ಬಿಡುಗಡೆಯಾದರೂ ಎ-ಪ್ರಮಾಣಪತ್ರದೊಂದಿಗೆ ಎನ್ನಲಾಗಿದೆ.ತುಷಾರ್ ಕಪೂರ್ ಮತ್ತು ಸನ್ನಿ ಲಿಯೋನ್ ನಟಿಸಿರುವ ಮಿಳಪ್ ಝವೇರಿ ನಿರ್ದೇಶನದ ಈ ಚಿತ್ರ ನ್ಯಾಯಮಂಡಲಿಯ ತೀರ್ಪಿಗಾಗಿ ಕಾಯುತ್ತಿದೆ.