ಕನ್ನಡ ವಾರ್ತೆಗಳು

ದಿ. ಸುಂದರ್ ಕರ್ಮರನ್ ಶೃದ್ಧಾಂಜಲಿ ಸಭೆ

Pinterest LinkedIn Tumblr

Mumbai_sundarn_photo_1

ಮುಂಬಯಿ,ಜೂನ್. 02: ಕುಲಾಲ ಸಂಘ ಮುಂಬಯಿ ಇದರ ಸಿ. ಎಸ್. ಟಿ – ಮುಲುಂಡ್ -ಮಾನ್ ಖುರ್ದ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ , ಸೂರ್ಯ ಸುವಿಧ ಡಿಸೈನ್ ನ ಮಾಲಕ ಶ್ರೀ ಸುಂದರ್ ಕರ್ಮರನ್  ನಿಧನರಾಗಿದ್ದು, ಆ ಪ್ರಯುಕ್ತ ಶೃದ್ಧಾಂಜಲಿ ಸಭೆಯು ಸಂಘದ ಕಾರ್ಯಾಲಯದಲ್ಲಿ ತಾ 30-05-2015  ರಂದು ಜರಗಿತು.

ಸಂಘದ ಉಪಾಧ್ಯಕ್ಷ ದೇವದಾಸ್ ಕುಲಾಲ್ ರವರು ಸಭೆಯನ್ನು ಸ್ವಾಗತಿಸುತ್ತಾ, ಸಂಘದೊಂದಿಗೆ ಸುಂದರ್ ಕರ್ಮರನ್ ರವರ ಕಳೆದ 40 ವರ್ಷಗಳಿಂದ ಅನ್ಯೋನ್ಯವಾಗಿದ್ದರು, ಸರಳ ಸಜ್ಜನ ವ್ಯಕ್ತಿತ್ವದ ಅವರಿಗೆ ಚಿಕ್ಕ ಚಿಕ್ಕ ಮಕ್ಕಳೆಂದರೆ ಪಂಚಪ್ರಾಣ. ಸಂಘ ದ ಪ್ರತಿಯೊಂದು ಡಿಸೈನ್ ಮತ್ತು ಅಮೂಲ್ಯ ತ್ರೈಮಾಸಿಕದ ಮುಖಪುಟ ಬಹಳ ಸುಂದರವಾಗಿ ಮಾಡಿಕೊಡುತ್ತಿದ್ದರು ಎಂದು ತಿಳಿಸಿದರು.

Mumbai_sundarn_photo_5 Mumbai_sundarn_photo_2 Mumbai_sundarn_photo_3 Mumbai_sundarn_photo_4

ಸಂಘದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ರವರು ಸುಂದರ್ ಕರ್ಮರನ್ ರವರಿಗೆ ಶೃದ್ಧಾಂಜಲಿ ಅರ್ಪಿಸುತ್ತಾ “ನಾನು ಸಮಾಜ ಮುಖಿ ಕಾರ್ಯಗಳತ್ತ ಆಕರ್ಷಿತರಾಗಲು ಸುಂದರ್ ಅಂಕಲ್ ಅವರೇ ಮುಖ್ಯ ಕಾರಣ . ಚಿಕ್ಕಂದಿನಿಂದಲೂ ಅವರು ನನಗೆ ಆದರ್ಶ ವಾಗಿದ್ದರು. ದಿವಂಗತ ಡಾ. ಎಚ್ ಎಂ ಸುಬ್ಬಯ್ಯ ರವರ ಮಾರ್ಗದರ್ಶನ ದೊಂದಿಗೆ ಅವರು ವೃತ್ತಿ ಜೀವನವನ್ನು ಪ್ರಾರಂಬಿಸಿ, ಯಶಸ್ವಿ ಪಡೆದಿದ್ದರು. ಸಂಘದ ಪ್ರತಿಯೊಂದು ಚಟುವಟಿಕೆಗಳಲ್ಲ್ಲಿ ಇವರ ಸಹಕಾರ ಇತ್ತು. ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದರು . ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸದಾ ಉತ್ತೇಜನ ನೀಡುತ್ತಿದ್ದರು. ಮಕ್ಕಳಿಗಾಗಿ ಸಂಘದ ಮಹಾಸಭೆಯಂದು ಪ್ರತಿವರ್ಷ ಸೂರ್ಯ ಸುವಿಧ ಚಿತ್ರಕಲೆ ಸ್ಪರ್ಧೆ ಪ್ರಾರಂಬಿಸಿ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸುತ್ತಿದ್ದರು. ಅವರ ಹೆಸರಿನಲ್ಲಿ ಸಂಘದ ಮುಖಾಂತರ ಮಕ್ಕಳಿಗಾಗಿ ಏನಾದರೂ “ರೋಲಿಂಗ್ ಪ್ರಶಸ್ತಿ” ಆರಂಬಿಸಬೇಕೆಂದು ನನ್ನ ಆಶಯ. ಮುಂಬಯಿ ಸಂಘಕ್ಕೆ ಅವರ ಸೇವೆ ಅಪಾರ” ಎಂದರು.

ಗೌ ಪ್ರ ಕಾರ್ಯದರ್ಶಿ ಡಿ. ಐ. ಮೂಲ್ಯ ರವರು ಸುಂದರ್ ಕರ್ಮರನ್ ರವರ ಸಮಾಜ ಸೇವೆಯನ್ನು ಸ್ಲಾಘಿಸುತ್ತ ” ನನ್ನ ಈ ಕಾರ್ಯವದಿಯಲ್ಲಿ ಅವರು ಯಾವುದೇ ಕೆಲಸಕ್ಕೆ ಇಲ್ಲ ಅಂದವರಲ್ಲ. ಸಮಾಜಕ್ಕಾಗಿ ಪ್ರೀತಿ ಭಾವನೆ , ಮಕ್ಕಳೊಂದಿಗೆ ಅನ್ಯೋನ್ಯತೆ ಮೆಚ್ಚುವಂತದ್ದು ಎಂದು ತಿಳಿಸುತ್ತಾ ಶೃದ್ಧಾಂಜಲಿ ಅರ್ಪಿಸಿದರು.

ಅಮೂಲ್ಯದ ಉಪಸಂಪಾದಕ ಶಂಕರ್ ವೈ ಮೂಲ್ಯರವರು ಶೃದ್ಧಾಂಜಲಿ ಅರ್ಪಿಸುತ್ತಾ ” ‘ಪುನರಪಿ ಜನನಂ ಪುನರಪಿ ಮರಣಂ’ ಹುಟ್ಟಿದ ಪ್ರತಿಯೊಬ್ಬರಿಗೂ ಮರಣ ನಿಶ್ಚಿತ. ಇವರ ನಿಧನ ಸಂಘಕ್ಕೆ ಮತ್ತು ಸಮಾಜಕ್ಕೆ ದೊಡ್ಡ ನಷ್ಟ. ನಮಗೆ ಪ್ರತಿಯೊಂದು ಕೆಲಸಕ್ಕೂ ತಕ್ಷಣ ಸ್ಪಂದಿಸುತ್ತಿದ್ದರು. ಅವರ ಹೆಸರನ್ನು ಅವರ ಮಕ್ಕಳು ಅಮರವಾಗಿರಿಸಬೇಕು. ಅವರ ಸೇವೆಯನ್ನು ಅಮೂಲ್ಯ ಕಾರ್ಯಕಾರಿ ಮಂಡಳಿ ಸದಾ ನೆನವರಿಸುತ್ತದೆ ” ಎಂದು ನುಡಿದರು.

ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ ಪಿ. ಶೃದ್ಧಾಂಜಲಿ ಅರ್ಪಿಸುತ್ತಾ “ಎಲ್ಲರೊಂದಿಗೆ ಉತ್ತಮ ಸಂಭಂದ ಹೊಂದಿದ ಇವರ ನಿಧನ ತುಂಬಲಾರದ ನಷ್ಟ. ಇವರ ನಿಧನದ ಮರುದಿನವೇ ನಮ್ಮ ಸ್ಥಳೀಯ ಸಮಿತಿಯ ಸದಸ್ಯ ಡಾ. ಸುಭಾಸ್ ಬಂಗೇರರವರ ನಿಧನ ನಮಗೆ ಆಘಾತ ಗೊಳಿಸಿತು . ಈ ಇಬ್ಬರೂ ನನ್ನೊಂದಿಗೆ ಆತ್ಮೀಯರಾಗಿದ್ದರು. ಇವರ ನಿಧನದ ಸುದ್ದಿ ಸಹಿಸಲಾರದ ದುಃಖ ತಂದಿದೆ.” ಎಂದು ಭಾವೊದ್ಗತಿತರಾಗಿ ನುಡಿದರು.

ಸಿ. ಎಸ್. ಟಿ – ಮುಲುಂಡ್ -ಮಾನ್ ಖುರ್ದ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ರಾಜೇಶ್ ಬಂಜನ್ ರವರು ವಿಷಾದ ವ್ಯಕ್ತಪಡಿಸುತ್ತಾ “ಸ್ಥಳೀಯ ಸಮಿತಿಯ ಸಭೆಯು ಅವರ ಮನೆಯಲ್ಲಿಯೇ ಜರಗುತ್ತಿದ್ದು , ಸದಾ ನಮಗೆ ಮಾರ್ಗದರ್ಶನ ನೀಡುತ್ತಿದ್ದರು . ಇವರ ನಿಧನ ನಮ್ಮ ಸಮಿತಿಗೆ ದೊಡ್ಡ ಆಘಾತ. ಇವರ ನಿದನದ ಮರುದಿನವೇ ಡಾ. ಸುಭಾಶ್ ಬಂಗೇರರವರ ನಿದನದ ಸುದ್ದಿ ನಮ್ಮನ್ನು ಮತ್ತಷ್ಟು ಆಘಾತ ಗೊಳಿಸಿತ್ತು. ಇವರ ಕುಟುಂಬಗಳಿಗೆ ದುಃಖ ಸಹಿಸುವ ಶಕ್ತಿ ಆ ದೇವರು ನೀಡಲಿ ಎಂದು ನುಡಿದರು.

ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ್ ಬಂಗೇರ ರವರು ಮಾತನಾಡುತ್ತ ” ಕುಲಾಲ ಭವನದ ಅಪೀಲ್ ಡಿಸೈನ್ ಮತ್ತು ಪ್ರತಿಯೊಂದು ಕೆಲಸದ್ದಲ್ಲೂ ನಮಗೆ ಸಹಕರಿಸಿದ್ದರು . ಕುಲಾಲ ಪ್ರತಿಷ್ಟಾನ ಆಯೋಜಿಸಿದ “ಕುಲಾಲ ಉತ್ಸವ”ದಲ್ಲಿ ಪ್ರಮುಖ ಪಾತ್ರವಹಿಸಿ, ಯಶಸ್ವಿಯಾಗುವಲ್ಲಿ ಅವಿರತವಾಗಿ ಸಹಕರಿಸಿದ್ದರು. ಎಂದರು

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಬಂಜನ್ ಶೃದ್ಧಾಂಜಲಿ ಅರ್ಪಿಸುತ್ತ “ಸದಾ ಹಸನ್ಮುಖಿ ವ್ಯಕ್ತಿತ್ವದ ಇವರು ಸಮಾಜದ ಆದರ್ಶ ವ್ಯಕ್ತಿ. ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುತ್ತಾ ಮಾರ್ಗದರ್ಶನ ನೀಡುತ್ತಿದ್ದರು” ಎಂದರು

ಅಮೂಲ್ಯದ ಸಂಪಾದಕ ನಾರಾಯಣ ನೆತ್ರಕೆರೆ ಮಾತನಾಡುತ್ತ ” ಅಮೂಲ್ಯದ ಸಂಪಾದಕ ಮಂಡಳಿಗೆ ಸದಾ ಸಹಕರಿಸುತ್ತಾ, ತನ್ನ ಕಲಾತ್ಮಕ ರಚನೆಯೊಂದಿಗೆ ಅಮೂಲ್ಯದ ಮುಖಪುಟದ ಅಂದವನ್ನು ಹೆಚ್ಚಿಸಿದ್ದರು. ಇವರ ಸೇವೆ ಅಜರಾಮರ ” ಎಂದರು

ಸಭೆಯಲ್ಲಿ ಉಪಸ್ಥಿತರಿದ್ದ ಪಿ. ಶೇಖರ್ ಮೂಲ್ಯ , ಜಯರಾಮ್ ಕೆ. ಮೂಲ್ಯ, ಆನಂದ್ ಬಿ. ಮೂಲ್ಯ , ಬಿ. ಜಿ. ಅಂಚನ್ , ಶೀನ ಜಿ. ಮೂಲ್ಯ ಶೃದ್ದಾಂಜಲಿ ಅರ್ಪಿಸುತ್ತ ಮಾತನಾಡಿದರು. ಸುಂದರ್ ಕರ್ಮರನ್ ರವರ ಮಗ ಸೂರಜ್ ಕರ್ಮರನ್ ಉಪಸ್ಥಿತರಿದ್ದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಸ್ವರ್ಗಸ್ಥರಾದ ಸುಂದರ್ ಕರ್ಮರನ್ ರವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮೌನಪ್ರಾರ್ಥನೆ ಮಾಡಿ ಶೃದ್ಧಾಂಜಲಿ ಅರ್ಪಿಸಲಾಯಿತು. ಈ ಸಭೆಯಲ್ಲಿ ಸಂಘದ ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್ , ಜೊತೆ ಕಾರ್ಯದರ್ಶಿಗಳಾದ ಶಶಿಕುಮಾರ್ ವಿ. ಕುಲಾಲ್ ಮತ್ತು ಸುನಿಲ್ ಕುಲಾಲ್ , ಕರುಣಾಕರ್ ಬಿ. ಸಾಲ್ಯಾನ್ , ಡಾ. ಹರೀಶ್ ಬಿ. ಸಾಲ್ಯಾನ್ , ಸುರೇಶ್ ಕುಲಾಲ್, ಬಿ. ಅಣ್ಣೀ ಮೂಲ್ಯ, ಸತೀಶ್ ಬಂಗೇರ, ದಯಾನಂದ್ ಕುಲಾಲ್, ಶೇಖರ್ ಐ. ಮೂಲ್ಯ, ಗೋವಿಂದ್ ಬಂಜನ್ , ಸುಂದರ್ ಕರ್ಮರನ್ ರವರ ತಮ್ಮ ಮಧು ಕರ್ಮರನ್ ಮತ್ತು ಅಪಾರ ಸಂಖ್ಯೆಯಲ್ಲಿ ಹಿತೈಸಿಗಳು ಹಾಜರಿದ್ದರು.

Write A Comment