ಮನೋರಂಜನೆ

ನನ್ನ ಚಿತ್ರಗಳನ್ನು ನಾನೇ ನೋಡೋದು ಕಷ್ಟ ಎಂದ ರಣವೀರ್ ಸಿಂಗ್

Pinterest LinkedIn Tumblr

ranveer-singh

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ತೆರೆ ಮೇಲೆ ಕಂಡರೆ ರಣವೀರ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಆದರೆ ಸ್ವತಃ ರಣವೀರ್‍ಗೆ ತನ್ನನ್ನು ತಾನು ಬಿಗ್ ಸ್ಕ್ರೀನ್‍ನಲ್ಲಿ ನೋಡಲು ಇಷ್ಟವಾಗೋದಿಲ್ಲವಂತೆ. ನನ್ನ ಚಿತ್ರಗಳನ್ನು ನಾನೇ ನೋಡೋದು ಕಷ್ಟ ಅನ್ನಿಸುತ್ತದೆ. ಆದರಲ್ಲೂ ಕ್ಲೀನ್ ಶೇವ್ ಮಾಡಿದ ಮುಖ ನೋಡಲು ನನಗೆ ಇಷ್ಟವಿಲ್ಲ ಎಂದು ರಣವೀರ್ ಹೇಳಿದ್ದಾರೆ.

ತನ್ನ ಅಭಿನಯದ ‘ಲೊಟೇರಾ’ ಚಿತ್ರದ ಕೆಲವು ಸನ್ನಿವೇಶಗಳು ನನಗೆ ನೋಡಲು ಇಷ್ಟವೆಂದು ಹೇಳಿಕೊಂಡಿದ್ದಾರೆ. ಲೊಟೇರಾ ಚಿತ್ರದಲ್ಲಿ ನಾನು ಹೊಸಬನಾದ ಕಾರಣ ಕೆಲವು ತಪ್ಪು ಮಾಡಿದ್ದೇನೆ. ಆದರೆ ಸೆಕೆಂಡ್ ಆಫ್‍ನಲ್ಲಿ ಚನ್ನಾಗಿ ನಟಿಸಿದ್ದೇನೆ. ಚಿತ್ರವಾಗಿ ‘ಬ್ಯಾಂಡ್ ಬಾಜಾ ಬಾರಾತ್’ ನನಗೆ ಇಷ್ಟ, ಆದರೆ ಅಭಿನಯದಲ್ಲಿ ‘ಲೊಟೇರಾ’ ನನಗೆ ಖುಷಿಕೊಟ್ಟಿದೆ ಎಂದಿದ್ದಾರೆ.

ಯಾರ ಮುಖ ತೆರೆಯ ಮೇಲೆ ನೋಡಲು ಇಷ್ಟವಾಗುತ್ತದೆ ಎಂಬ ಪ್ರಶ್ನೆಗೆ, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮತ್ತು ನವಾಜುದ್ದಿನ್ ಸಿದ್ಧಿಕಿ ಹೆಸರನ್ನು ಸೂಚಿಸಿದ್ದಾರೆ. ರಣವೀರ್ ಸಿಂಗ್ ಅಭಿನಯದ ‘ದಿಲ್ ದಢಕನೆ ದೋ’ ಚಿತ್ರ ಜೂನ್-5ರಂದು ತೆರೆಕಾಣಲಿದೆ.

Write A Comment