ಮನೋರಂಜನೆ

ಅಭಿಮಾನಿಗಳೊಂದಿಗೆ 54 ನೇ ಹುಟ್ಟುಹಬ್ಬ ಆಚರಿಸಿಕೊಂಡ ಕ್ರೇಜಿಸ್ಟಾರ್

Pinterest LinkedIn Tumblr

Ravichandran-4

ಬೆಂಗಳೂರು, ಮೇ ೩೦-ಸ್ಯಾಂಡಲ್‌ವುಡ್‌ನ ಕನಸುಗಾರ, ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರು ತಮ್ಮ ೫೪ನೇ ಹುಟ್ಟುಹಬ್ಬವನ್ನು  ನಗರದ ಅಭಿಮಾನಿ ವಸತಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡರು. ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಅಭಿಮಾನಿ ವಸತಿಗೆ ಕ್ರೇಜಿಸ್ಟಾರ್ ರವಿಚಂದ್ರನ್

ಆಗಮಿಸುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳು ಅವರ ಮೇಲೆ ಪುಷ್ಪವೃಷ್ಟಿ ಸುರಿಸುವ ಮೂಲಕ ಭವ್ಯ ಸ್ವಾಗತ ಕೋರಿದರು. ಈ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ರವಿಚಂದ್ರನ್ ಅವರಿಗೆ ಉಡುಗೊರೆ ನೀಡಿ ಸಂತಸ ಹಂಚಿಕೊಂಡರು. ರವಿಚಂದ್ರನ್ ಅವರು ಬೃಹತ್‌ಗಾತ್ರದ ಕೇಕ್ ಕತ್ತರಿಸಿ ಮಗ  ಮನೋರಂಜನ್‌ಗೆ ತಿನ್ನಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ  ಮುಗಿಲು ಮುಟ್ಟಿತ್ತು.

ಬಹುನಿರೀಕ್ಷಿತ ಚಿತ್ರಗಳಾದ ಅಪೂರ್ವ ಮತ್ತು ಮಂಜಿನಹನಿ ಚಿತ್ರದ ಪೋಸ್ಟರ್‌ಗಳು ಅಭಿಮಾನಿ ವಸತಿಯಲ್ಲಿ ರಾರಾಜಿಸುತ್ತಿದ್ದವು. ಅಖಿಲ ಕರ್ನಾಟಕ ಕ್ರೇಜಿಸ್ಟಾರ್ ಅಭಿಮಾನಿಗಳ ಬಳಗ ಹಾಗೂ ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳಾ  ಅಭಿಮಾನಿಗಳು ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಕನ್ನಡ ಚಿತ್ರರಂಗದ ನಟರಾದ ರಾಘವೇಂದ್ರ ರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್, ಹಾಸ್ಯ ನಟ ಬುಲೆಟ್ ಪ್ರಕಾಶ್ ಸೇರಿದಂತೆ ಹಲವಾರು ನಟ, ನಟಿಯರು ಆಗಮಿಸಿ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

Write A Comment