ಅಂತರಾಷ್ಟ್ರೀಯ

ಪಾಕಿಸ್ತಾನ-ಜಿಂಬಾಬ್ವೆ ಕ್ರಿಕೆಟ್ ಮ್ಯಾಚ್ ವೇಳೆ ಆತ್ಮಾಹುತಿ ಬಾಂಬ್ ದಾಳಿ

Pinterest LinkedIn Tumblr

Bomb-blast-at-gadafi

ಲಾಹೋರ್, ಮೇ 30-ಕಳೆದ ರಾತ್ರಿ ಪಾಕಿಸ್ತಾನ-ಜಿಂಬಾಬ್ವೆ ತಂಡಗಳ ನಡುವೆ ಅಂತಾರಾಷ್ಟ್ರೀಯ ಏಕದಿನ ಸರಣಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಲೆ ಇಲ್ಲಿನ ಗಡಾಫಿ ಕ್ರೀಡಾಂಗಣದ ಸಮೀಪದಲ್ಲೇ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಸ್ಥಳವನ್ನು ಗುರಿಯಾಗಿಟ್ಟುಕೊಂಡು ಆತ್ಮಾಹುತಿ ದಳದ ಉಗ್ರನೊಬ್ಬ ಸ್ಫೋಟಕ್ಕೆ ಪ್ರಯತ್ನಿಸಿದ್ದು, ಸ್ಟೇಡಿಯಂ ಸ್ವಲ್ಪ ದೂರ ಇರುವಾಗಲೇ ಕಲ್ಮಾ ಚೌಕ್‌ನಲ್ಲಿ ರಿಕ್ಷಾವೊಂದರಲ್ಲಿ ಬರುತ್ತಿದ್ದ ಭಯೋತ್ಪಾದಕ ಸ್ಫೋಟಿಸಿಕೊಂಡಿದ್ದಾನೆ. ಈ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ನಾಲ್ವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲೇ ಸಬ್‌ಇನ್ಸ್‌ಪೆಕ್ಟರ್ ಅಬ್ದುಲ್ ಮಜೀದ್ ಃಆಗೂ ಮತ್ತೊಬ್ಬ ಪೇದೆ ಸಾವನ್ನಪ್ಪಿದ್ದರು. ಇನ್ನಿಬ್ಬರ ಸ್ಥಿತಿಯೂ ಗಂಭೀರವಾಗಿದ್ದು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಈ ಸ್ಫೋಟ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಣೆಯೊಂದನ್ನು ಹೊರಡಿಸಿ, ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿದೆ ಎಂದು ಹೇಳಿತ್ತು. ಸ್ಥಳದಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಮಾಧ್ಯಮದವರೂ ಸೇರಿದಂತೆ ಯಾರಿಗೂ ಸ್ಫೋಟ ಸ್ಥಳಕ್ಕೆ ಪ್ರವೇಶ ಮಾಡಲು ಅವಕಾಶ ನೀಡಿಲ್ಲ. ಆತ್ಮಾಹುತಿ ಬಾಂಬ್ ಸ್ಪೋಟಿಸಿದೆ ಎಂಬ ವರದಿಯನ್ನು ತಳ್ಳಿ ಹಾಕಿರುವ ಪೊಲೀಸ್ ಅಧಿಕಾರಿಗಳು, ಇಂದೊಂದು ಸಾಮಾನ್ಯ ಸ್ಫೋಟವೇ ಹೊರತು ಉಗ್ರರ ಆತ್ಮಾಹುತಿ ದಾಳಿಯಲ್ಲ ಎಂದು ಹೇಳಿದ್ದಾರೆ.

Write A Comment