ಕನ್ನಡ ವಾರ್ತೆಗಳು

ನುಸ್ರತ್ತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ13 ಜೋಡಿಗಳಿಗೆ ಸಾಮೂಹಿಕ ಸರಳ ವಿವಾಹ

Pinterest LinkedIn Tumblr

Ullala-Mass-Marriege

ಉಳ್ಳಾಲ, ಮೇ. 30: ಪ್ರಥಮ ವರ್ಷದಲ್ಲಿ 3 ಜೋಡಿಗಳು ಎರಡನೇ ವರ್ಷದಲ್ಲಿ 9 ಜೋಡಿಗಳು ಮೂರನೇ ವರ್ಷದಲ್ಲಿ 15 ಜೋಡಿಗಳು ಇದೀಗ ನಾಲ್ಕನೇ ವರ್ಷದಲ್ಲಿ 13 ಜೋಡಿ ಹೀಗೆ ಒಟ್ಟು 40 ಜೋಡಿ ಉಚಿತ ಸಾಮೂಹಿಕ ವಿವಾಹ ಇಂತಹ ಉತ್ತಮ ಕೆಲಸ ಹಲ್ಲಾ‌ಅನಿಗೆ ಹೆಚ್ಚು ಇಷ್ಟಪಟ್ಟ ಕಾರ್ಯ. ಸರಳ ವಿವಾಹ ಕಾರ್ಯಕ್ರಮ ಒಂದು ಪ್ರಚಾರಕಾಗಿ, ಹೆಸರಿಗಾಗಿ, ಆಡಂಬರಕ್ಕಾಗಿ ಅಗಾದೆ ಲೋಕ ಹೊಡಯರಾದ ಹಲ್ಲಾವಿನ ಕೃಪೆಗಾಗಿರಲ್ಲಿ ಎಂದು ಬೋಳಂಗಡಿ ಹವ್ವ ಜುಮಾ ಮಸ್ಜಿದ್ ಖತೀಬ್ ಸೈಯ್ಯದ್ ಯಹ್ಯಾ ತಂಙಳ್ ಹೇಳಿದರು.

ಅವರು ತೊಕ್ಕೊಟ್ಟುವಿನ ಯುನಿಟಿ ಹಾಲ್‌ನಲ್ಲಿ ನಡೆದ ನುಸ್ರತ್ತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ (ರಿ) ಅಳೇಕಲ ಉಳ್ಳಾಲ ಇವರು ಅಯೋಜಿಸಿದ 13  ಜೋಡಿಗಳಿಗೆ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದ.ಕ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ 13 ಜೋಡಿಗಳಿಗೆ ನಿಕಾಹ್ ನೆರವೇರಿಸಿದ್ದರು.

ಸಚಿವ ಯು.ಟಿ ಖಾದರ್ ಕಾರ್ಯಕ್ರಮಕ್ಕೆ ಶುಭಾಹಾರೈಸಿದ್ದರು.

ಮೊಹಿದ್ದೀನ್ ಜುಮಾ ಮಸ್ಜಿದ್ ಖತೀಬ್ ಯುಸುಫ್ ಮಿಸ್ಬಾಯಿ, ಯು.ಕೆ ಮೋನು ಕಣಚೂರು, ಚಂದ್ರಹಾಸ್ ಉಳ್ಳಾಲ್, ಮಾಜಿ ಮೇಯರ್ ಕೆ.ಈ ಅಶ್ರಫ್, ಹಿಂದುಸ್ಥಾನ್ ಬಾವ ಬಿಲ್ಡರ್‍ಸ್‌ನ ಕೆ. ಬಾವ ಅಬ್ದುಲ್ ಖಾದರ್ ಹಾಜಿ, ಸುಲ್ತಾನ್ ಗೋಲ್ಡ್‌ನ ಅಡಳಿತ ನಿದೇರ್ಶಕ ಟಿ.ಎಂ ಅಬ್ದುಲ್ ರವೂಫ್, ಎಫ್. ಎ ಅಬ್ದುಲ್ ಬಶೀರ್, ಉದ್ಯಮಿ ಕತ್ತಾರ್ ಇಬ್ರಾಹೀಂ, ರಾಜಧಾನಿ ಗೋಲ್ಡ್‌ನ ಮೊಹಮ್ಮದ್ ಹಾಜಿ, ಸಹಾರ ಅಸ್ಪತ್ರೆಯ ಅಡಳಿತ ನಿದೇರ್ಶಕ ಅಬ್ದುಲ್ ಸಮ್ಮದ್ ಹಾಜಿ, ತಲಪಾಡಿ ಸ್ನೇಹನಿಲಯದ ಜೋಸೆಫ್, ಹಾಜಿ ಇದ್ದೀನಬ, ವಿದ್ಯಾಧರ್ ಶೆಟ್ಟಿ, ಅಳೇಕಲ ಜುಮಾ ಮಸ್ಜಿದ್ ಅಧ್ಯಕ್ಷ ಯು.ಎ ಇಸ್ಮಾಯಿಲ್, ಬಿ.ಎನ್ ಮೊಹಿದ್ದೀನ್ ನವಾಝ್, ಗೋವಾ ಸಫಾ ಫೀಶಸ್‌ನ ಮೊಹಮ್ಮದ್ ಅಸೀಫ್ ಇಬ್ರಾಹೀಂ, ಫಾರೂಕ್ ಉಳ್ಳಾಲ್, ಯು.ಎಸ್ ಅಬೂಬಕ್ಕರ್ ಹಾಜಿ, ನುಸ್ರತ್ತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ (ರಿ)ನ ಯು.ಎಸ್ ಹನೀಫ್, ಕೋಶಧಿಕಾರಿ ಕೆ.ಎನ್ ಮೊಹಮ್ಮದ್, ಯು.ಎಚ್ ಸಿದ್ದೀಕ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ನುಸ್ರತ್ತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷ ಮೊಹಮ್ಮದ್ ತ್ವಾಹಾ ಅತಿಥಿಗಳಾನ್ನು ಸ್ವಾಗತಿಸಿದ್ದರು. ಕೆ.ಎಂ.ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದ್ದರು.

_M.Arif Kalkatta

Write A Comment