ಅಂತರಾಷ್ಟ್ರೀಯ

ಹೆಣ್ಣು ಮಕ್ಕಳು ಜೀನ್ಸ್ ತೊಡುವುದರಿಂದ ಭೂಮಿಯೂ ಕಂಪಿಸುತ್ತದೆಯಂತೆ !

Pinterest LinkedIn Tumblr

jean

ಹೆಣ್ಣು ಮಕ್ಕಳು ಜೀನ್ಸ್ ಹಾಕುವುದರಿಂದ ಈ ಪ್ರಪಂಚದಲ್ಲಿ ಆಗಾಗ ಭೂಕಂಪನಗಳಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತದೆ ಎಂದು ಮುಸ್ಲೀಂ ಮುಖಂಡನೊಬ್ಬ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.

ಪಾಕಿಸ್ತಾನದ ಪ್ರಮುಖ ಧಾರ್ಮಿಕ ಮುಖಂಡ ಜಮಾತ್-ಉಲೇಮಾ-ಇ-ಇಸ್ಲಾಮಿ-ಫಜಿ ಸಂಘಟನೆ ಮುಖ್ಯಸ್ಥ ಮೌಲಾನ ಫಜ್ಲುರ್ ರೆಹಮಾನ್  ಈ ತರಹದ ಹೇಳಿಕೆ ನೀಡಿದ್ದು ಈತನ ಪ್ರಕಾರ ಮಹಿಳೆಯರ ಇಂತಹ ದೇಹ ಪ್ರದರ್ಶನದ ಸ್ವಭಾವದಿಂದಾಗಿಯೇ ಭೂಕಂಪನಗಳಂತಹ ಪ್ರಾಕೃತಿಕ ವಿಕೋಪಗಳು ಮತ್ತು ಹಣದುಬ್ಬರದತಂಹ ಸಮಸ್ಯೆಗಳು ಸಂಭವಿಸುತ್ತಿವೆ ಹೀಗಾಗಿ ಸೈನಿಕರು ಜೀನ್ಸ್ ಧರಿಸುವ ಹೆಣ್ಣುಮಕ್ಕಳ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬೇಕು ಎಂದು ಫಜ್ಲುರ್ ರೆಹಮಾನ್ ಗುಡುಗಿದ್ದಾನೆ.

ಹೆಣ್ಣು ಮಕ್ಕಳ ಈ ಆಂಗಿಕ ಪ್ರದರ್ಶನದ ಹವ್ಯಾಸದಿಂದಾಗಿ ವಿಶ್ವಾದ್ಯಂತ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಬಲೂಚಿಸ್ತಾನದಲ್ಲಿನ ಬಿಕ್ಕಟ್ಟು, ಪಾಕಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿಯ ಹದಗೆಡುವಿಕೆಗೂ ಇದೇ ಕಾರಣ.  ಹೀಗಾಗಿ ಇಂತಹ ಮಹಿಳೆಯರನ್ನು ಮನೆಯಲ್ಲಿ ಕೂಡಿ ಆಗಲಿರುವ ಅವಾಂತರವನ್ನು  ತಪ್ಪಿಸಿ ಎಂದು ಕರೆ ನೀಡಿದ್ದಾನೆ.

Write A Comment