ಕರ್ನಾಟಕ

ದೇವೇಗೌಡರನ್ನು ಚಹಾಕೂಟಕ್ಕೆ ಕರೆದ ಮೋದಿ : ಜನತಾ ಪರಿವಾರವನ್ನು ಒಡೆಯುವ ತಂತ್ರ ..?

Pinterest LinkedIn Tumblr

4073Manic Monday123

ಮಣ್ಣಿನ ಮಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಯ್ ಪೆ ಚರ್ಚಾಗೆ ಆಹ್ವಾನ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಜೂನ್ 3 ಅಥವಾ 4ರಂದು ಚಹಾಕೂಟದೊಂದಿಗೆ ಮಾತುಕತೆ ನಡೆಸಲು ಬನ್ನಿ ಎಂದು ಮೋದಿ ಅವರು ಗೌಡರಿಗೆ  ಆಹ್ವಾನ ನೀಡಿದ್ದಾರೆ ಎನ್ನಲಾಗಿದ್ದು  ಭೇಟಿಯ ಸಮಯದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗೆಗೆ ಚರ್ಚಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಈ ಕುರಿತು ಶುಕ್ರವಾರ ಮಾತನಾಡಿದ ಎಚ್.ಡಿ.ದೇವೇಗೌಡರು, ‘ನರೇಂದ್ರ ಮೋದಿ ಅವರು  ಆಹ್ವಾನ ನೀಡಿದ್ದಾರೆ. ಪ್ರಧಾನಿ ಕಚೇರಿಯಿಂದ ನನ್ನ ಆಪ್ತ ಸಹಾಯಕನಿಗೆ ಕರೆ ಬಂದಿದೆ. ಹಾಗಾಗಿ ‘ಜೂನ್‌ 3 ಅಥವಾ 4ರಂದು ದೆಹಲಿಗೆ ತೆರಳುತ್ತಿದ್ದು, ಆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಒಂದಾಗಲಿರುವ ಜನತಾ ಪರಿವಾರವನ್ನು ಸಡಿಲಗೊಳಿಸುವ ರಾಜಕೀಯ ತಂತ್ರವನ್ನು ಮೋದಿ ಅವರು ಹೊಂದಿದ್ದಾರೆ ಎನ್ನಲಾಗಿದ್ದು ಇದೇ ಕಾರಣಕ್ಕೆ ಎಚ್.ಡಿ.ದೇವೇಗೌಡರನ್ನು ಮನವೊಲಿಸುವ ನಿಟ್ಟಿನಲ್ಲಿ ಈ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

Write A Comment