ರಾಷ್ಟ್ರೀಯ

ಮೋದಿ ಒಬ್ಬ ನಿಪುಣ ಆರ್ಥಿಕ ಶಾಸ್ತ್ರಜ್ಞ ಎಂದ ಸ್ಮತಿ ಇರಾನಿ

Pinterest LinkedIn Tumblr

1462243404-smriti-modi

ಪ್ರಧಾನಿ ನರೇಂದ್ರ ಮೋದಿ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದು ದೇಶದ ಆರ್ಥಿಕತೆಗೆ ಧನಾತ್ಮಕ ನಿರ್ದೇಶನ ನೀಡಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಹಾಡಿ ಹೊಗಳಿದ್ದಾರೆ.

ಮೋದಿ ಆರ್ಥಿಕತೆ ಟೀಕಿಸಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿರುವ ಸ್ಮತಿ ಇರಾನಿ ಮೋದಿ ಓರ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದು  ದೇಶದ ಆರ್ಥಿಕತೆ ಬೆಳವಣಿಗೆಗೆ ಅವರು ಧನಾತ್ಮಕ ಕೊಡುಗೆ ನೀಡಿದ್ದು ಒಂದು ವರ್ಷದ ಅವಧಿಯಲ್ಲಿ ಜನಧನ, ಸುಕನ್ಯ ಸಮೃದ್ಧಿ, ವಿಮೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಾಮಾನ್ಯ ಜನರಲ್ಲಿ ಭರವಸೆ ಮೂಡಿಸುವಲ್ಲಿ ಸಫಲರಾಗಿದ್ದಾರೆ ಎಂದು ವರ್ಣಿಸಿದರು.

ಬುಧವಾರ ಮನಮೋಹನ ಸಿಂಗ್‌ ಅವರು, ದೇಶದ ಆರ್ಥಿಕ ಸ್ಥಿತಿ ಬಗ್ಗೆ ಟೀಕಿಸಿ ಬಳಿಕ ರಾಹುಲ್‌ ಗಾಂಧಿ, ಮನಮೋಹನ ಸಿಂಗ್‌ ಅವರಿಂದ ಮೋದಿ ಪಾಠ ಮಾಡಿಸಿಕೊಂಡಿದ್ದರು ಎಂಬ ಹೇಳಿಕೆ  ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಮತಿ ಇರಾನಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

Write A Comment