ರಾಷ್ಟ್ರೀಯ

ಮದ್ಯಕ್ಕೆ ಬೆಂಕಿ ಇಟ್ಟು ಮಾರಾಟಗಾರನಿಗೆ ಥಳಿಸಿದ ಮಹಿಳೆಯರು

Pinterest LinkedIn Tumblr

113106shop

ಗ್ರೇಟರ್ ನೋಯ್ಡಾ: ತಮ್ಮ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವ ಮೂಲಕ ಯುವಕರನ್ನು ಹಾಳುಗೆಡುವುತ್ತಿರುವುದರ ವಿರುದ್ದ ಅಕ್ರೋಶಗೊಂಡ ಮಹಿಳೆಯರು ಮದ್ಯದಂಗಡಿ ಮೇಲೆ ದಾಳಿ ಮಾಡಿ ಮಾರಾಟಗಾರನನ್ನು ಥಳಿಸಿ ಅಕ್ರಮ ಮದ್ಯಕ್ಕೆ ಬೆಂಕಿ ಇಟ್ಟಿದ್ದಾರೆ.

ಗ್ರೇಟರ್ ನೋಯ್ಡಾದ ಚಿರೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ಮದ್ಯ ಮಾರಾಟ ಮಾಡದಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯವರು ಇಲ್ಲಿ ಮದ್ಯದಂಗಡಿ ಅರಂಭಿಸಲು ಅನುಮತಿ ನೀಡಿರಲಿಲ್ಲ. ಆದರೂ ದಂಧೆಕೋರರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದಾಗಿ ಗ್ರಾಮದ ಸ್ವಾಸ್ಥ್ಯವೇ ಹಾಳಾಗಿ ಹೋಗಿತ್ತು.

ಈ ಕುರಿತು ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮಹಿಳೆಯರ ಗುಂಪು ತಾವೇ ಸ್ವತಃ ಮದ್ಯದಂಗಡಿ ತೆರಳಿ ಅಲ್ಲಿದ್ದ ಮಾರಾಟಗಾರನಿಗೆ ಚೆನ್ನಾಗಿ ಥಳಿಸಿದೆ. ಬಳಿಕ ಸಂಗ್ರಹಿಸಿಟ್ಟಿದ್ದ ಮದ್ಯದ ದಾಸ್ತಾನಿಗೆ ಬೆಂಕಿ ಹಚ್ಚಿದೆ. ಈ ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Write A Comment