ಮನೋರಂಜನೆ

ಕನ್ನಡತಿಯೊಂದಿಗೆ ಪ್ರೀತಿಗೆ ಬಿದ್ದರಾ ಈ ಬಾಲಿವುಡ್ ನಟ..?

Pinterest LinkedIn Tumblr

9292Hritik-Pooja-Cover-pic

ಖ್ಯಾತ ಬಾಲಿವುಡ್ ನಟರೊಬ್ಬರು ತಮ್ಮೊಂದಿಗೆ ನಟಿಸುತ್ತಿರುವ ಕನ್ನಡತಿಗೆ ಮನ ಸೋತರಾ..? ಇಂತದೊಂದು ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ವದಂತಿಗೆ ಪೂರಕವಾಗಿ ಇವರಿಬ್ಬರು ನಡೆದುಕೊಳ್ಳುತ್ತಿರುವುದೂ ಕುತೂಹಲ ಮೂಡಿಸಿದೆ.

ಹೌದು..! ಅಚ್ಚ ಕನ್ನಡತಿ, ಮಂಗಳೂರು ಬೆಡಗಿ ಪೂಜಾ ಹೆಗಡೆಯವರೊಂದಿಗೆ ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಪ್ರೀತಿಯಲ್ಲಿ ಸಿಲುಕಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಹೃತಿಕ್ ರೋಷನ್ ಅವರೊಂದಿಗೆ ‘ಮೆಹೆಂಜೋದಾರೋ’ ಚಿತ್ರದಲ್ಲಿ ಪೂಜಾ ಹೆಗಡೆ ನಟಿಸುತ್ತಿದ್ದು, ಚಿತ್ರೀಕರಣದ ವೇಳೆ ಇವರಿಬ್ಬರು ಪರಸ್ಪರ ಹತ್ತಿರವಾಗಿದ್ದಾರೆನ್ನಲಾಗಿದೆ.

ತಮ್ಮ ಬಹು ಕಾಲದ ಗೆಳತಿ ಸೂಸಾನ್ ಜೊತೆ ವಿವಾಹವಾಗಿದ್ದ ಹೃತಿಕ್ ಬಳಿಕ ಅವರಿಂದ ವಿಚ್ಚೇದನ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಹೃತಿಕ್ ಭಾರೀ ಮೊತ್ತವನ್ನು ಪರಿಹಾರವಾಗಿ ಸೂಸಾನ್ ಅವರಿಗೆ ನೀಡಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಬಳಿಕ ಹೃತಿಕ್ ಹಾಗೂ ಕಂಗನಾ ರಣಾವತ್ ಹಲವು ಬಾಲಿವುಡ್ ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಇವರಿಬ್ಬರು ವಿವಾಹವಾಗಲಿದ್ದಾರೆಂಬ ಮಾತುಗಳ ಮಧ್ಯೆ ಈಗ ಹೃತಿಕ್ ಜೊತೆ ಕನ್ನಡತಿ ಪೂಜಾ ಹೆಗಡೆ ಹೆಸರು ಕೇಳಿ ಬರುತ್ತಿರುವುದು ಕೇವಲ ವದಂತಿಯಾ ಅಥವಾ ನಿಜವಾ ಎಂಬುದನ್ನು ಕಾದು ನೋಡಬೇಕಿದೆ.

Write A Comment