ಅಂತರಾಷ್ಟ್ರೀಯ

ಪೊಲೀಸ್ ಠಾಣೆಯಲ್ಲಿ ಬೆತ್ತಲಾಗಿ ಕುಣಿದ ಯುವತಿ !

Pinterest LinkedIn Tumblr

6149144-Russian-police-who-filmed-and-mocked-mentally-ill

ಸಾರ್ವಜನಿಕರ ರಕ್ಷಣೆ ಪೊಲೀಸರ ಹೊಣೆ. ಆದರೆ ಮಾನಸಿಕ ಅಸ್ವಸ್ಥ ಯುವತಿಯೊಬ್ಬಳ ರಕ್ಷಣೆ ಮಾಡದೇ, ಆಕೆ ವಿವಸ್ತ್ರಗೊಂಡು ಕುಣಿದಾಗ ವಿಡಿಯೋ ಮಾಡಿದ್ದಾನೆ ಪೊಲೀಸ್ ಅಧಿಕಾರಿಯೊಬ್ಬ.

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಈ ಘಟನೆ ನಡೆದಿದೆ. ಸುಮ್ಮಸುಮ್ಮನೆ ಕೂಗಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ಪೊಲೀಸರು ಠಾಣೆಗೆ ಕರೆ ತಂದಿದ್ದಾರೆ. ಠಾಣೆಗೆ ಬರ್ತಾ ಇದ್ದಂತೆ, ಬಟ್ಟೆ ಬಿಚ್ಚಿದ ಯುವತಿ, ಟೇಬಲ್ ಮೇಲೆ ಹತ್ತಿ ಕುಣಿಯಲು ಆರಂಭಿಸಿದ್ದಾಳೆ, ಯುವತಿಗೆ ಬಟ್ಟೆ ಹಾಕಿ, ಡಾನ್ಸ್ ಮಾಡುವುದನ್ನು ತಡೆಯುವ ಬದಲು, ಪೊಲೀಸ್ ಅಧಿಕಾರಿ ತನ್ನ ಮೊಬೈಲ್ ನಲ್ಲಿ ಅವಳ ವಿವಸ್ತ್ರ ಡಾನ್ಸನ್ನು ಶೂಟ್ ಮಾಡಲು ಶುರುಮಾಡಿದ್ದಾನೆ.

ವಿಡಿಯೋ ಮಾಡುತ್ತಿರುವುದನ್ನು ನೋಡಿದ ಯುವತಿ ಡಾನ್ಸ್ ನಿಲ್ಲಿಸಿ, ಬಟ್ಟೆ ಧರಿಸಿದ್ದಾಳೆ. ಮಾನಸಿಕ ಅಸ್ವಸ್ಥೆಯಾದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವಿಡಿಯೋ ಮಾತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೇಲಾಧಿಕಾರಿಗಳು ಹೇಳಿದ್ದಾರೆ.

Write A Comment