ಮನೋರಂಜನೆ

ನಟ ಮತ್ತು ನಿರ್ದೇಶಕನ ನಡುವಿನ ವಾಕ್ಸಮರದ ವಿಡಿಯೋ ಬಹಿರಂಗ !

Pinterest LinkedIn Tumblr

6835IndiaTvddae21_arjun-varun-dhawan

ನಾಯಕ ಹಾಗೂ ನಿರ್ದೇಶಕರ ನಡುವಿನ ತಿಕ್ಕಾಟ ಹೊಸ ವಿಷಯವೇನಲ್ಲ. ಇದು ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ ಬಾಲಿವುಡ್ ಖ್ಯಾತ ನಟ ಹಾಗೂ ಖ್ಯಾತ ನಿರ್ದೇಶಕರ ನಡುವಿನ ವಾಕ್ಸಮರದ ವಿಡಿಯೋವೊಂದು ಬಹು ವರ್ಷಗಳ ಬಳಿಕ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

‘ಗುಂಡೇ’ ಚಿತ್ರದ ಖ್ಯಾತಿಯ ನಾಯಕ ಅರ್ಜುನ್ ಕಪೂರ್ ಹಾಗೂ ಬಾಲಿವುಡ್ ನಿರ್ದೇಶಕ ವರುಣ್ ಧವನ್ ಅವರ ನಡುವಿನ ಮಾತಿನ ಚಕಮಕಿಯ ವಿಡಿಯೋ ಇದಾಗಿದ್ದು, ಕೆಲ ವರ್ಷಗಳ ಹಿಂದೆ ಮುಂಬೈನ ಅಭಿನಯ ಶಾಲೆಯಲ್ಲಿ ಅರ್ಜುನ್ ಕಪೂರ್ ಹಾಗೂ ವರುಣ್ ಧವನ್ ಒಟ್ಟಿಗೆ ಕಲಿಯುತ್ತಿದ್ದರಂತೆ.

ಆಗ ಕಿರು ಚಿತ್ರವೊಂದನ್ನು ನಿರ್ಮಿಸಲಾಗಿದ್ದು, ಭೂಗತ ಜಗತ್ತಿನ ಕಥಾ ಹಂದರ ಹೊಂದಿರುವ ಈ ವಿಡಿಯೋದಲ್ಲಿ ಅರ್ಜುನ್ ಕಪೂರ್ ಹಾಗೂ ವರುಣ್ ಧವನ್ ಪಾತ್ರ ನಿರ್ವಹಿಸಿದ್ದಾರೆ. ಇಬ್ಬರು ಬೇರೆ ಬೇರೆ ಗ್ಯಾಂಗಿನ ಸದಸ್ಯರಾಗಿರುವ ಕಾರಣ ಕಿರು ಚಿತ್ರಕ್ಕಾಗಿ ಮಾತಿನ ಸಮರ ನಡೆಸಿದ್ದಾರೆ ಹೊರತು ನಿಜವಾಗಿಯೂ ಅಲ್ಲ. ಅಂದ ಹಾಗೆ ಇಬ್ಬರು ಆಗಿನಿಂದಲೂ ಸ್ನೇಹಿತರಾಗಿದ್ದರೂ ಒಂದೇ ಚಿತ್ರದಲ್ಲಿ ಕೆಲಸ ಮಾಡಿಲ್ಲವೆಂಬುದು ಗಮನಾರ್ಹ. ಈ ವಿಡಿಯೋ ಬಹಿರಂಗಗೊಂಡ ಬಳಿಕವಾದರೂ ಒಟ್ಟಿಗೆ ಕೆಲಸ ಮಾಡುವರೇನೋ ಕಾದು ನೋಡೋಣಾ.

Write A Comment