ರಾಷ್ಟ್ರೀಯ

ವರದಕ್ಷಿಣೆ ತರದಿದ್ದಕ್ಕೆ ಪತ್ನಿಯ ಮೂಗು, ಕೂದಲನ್ನು ಕತ್ತರಿಸಿದ!

Pinterest LinkedIn Tumblr

1428826204-5721

ಪಿಲಿಭಿಟ್: ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯ ಕೂದಲು ಮತ್ತು ಮೂಗನ್ನು ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆಯ ಪುರಾನ್ಪುರ ನಗರದಲ್ಲಿ ಮಂಗಳವಾರ ನಡೆದಿದೆ.

ಅಹಮದ್ಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕ್ರೂರ ಪತಿಯನ್ನು ಆಲಂ ಎಂದು ಗುರುತಿಸಲಾಗಿದೆ. ತನ್ನ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸದ ಕಾರಣಕ್ಕೆ ಆತ ಹರಿತವಾದ ಕತ್ತಿಯಿಂದ ಪತ್ನಿಯ ಮೂಗು ಮತ್ತು ಕೂದಲನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೀಡಿತ ಪತ್ನಿ ಹೇಳುವ ಪ್ರಕಾರ ಆಕೆಯ ತವರಿಂದ 20,000 ಹಣ ಮತ್ತು ಮೋಟಾರ್ ಸೈಕಲ್‌ನ್ನು ವರದಕ್ಷಿಣೆ ತರುವಂತೆ ಪತಿ ಆಲಂ ಒತ್ತಡ ಹೇರುತ್ತಿದ್ದ.

ಆರೋಪಿ ನಾಪತ್ತೆದಾಗಿದ್ದು ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆತನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಪೀಡಿತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Write A Comment