ರಾಂಚಿ, ಮೇ 22: ಇಂಡಿಯನ್ ಪ್ರಿಮೀಯರ್ ಲೀಗ್ನ ಕ್ವಾಲಿಫೈಯರ್-2ನೆ ಪಂದ್ಯದಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟ್ಗಳ ಜಯ ಗಳಿಸಿದೆ. ಇದರೊಂದಿಗೆ ಅದು ಫೈನಲ್ ಪ್ರವೇಶಿಸಿದೆ. ಗೆಲುವಿಗೆ 140 ರನ್ಗಳ ಸವಾಲನ್ನು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೂ ಒಂದು ಎಸೆತ ಬಾಕಿ ಉಳಿದಿರುವಂತೆ 7 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸಂಪಾದಿಸಿಗೆಲುವಿನ ನಗೆ ಬೀರಿತು.
ಮೈಕ್ ಹಸ್ಸಿ ಅರ್ಧಶತಕ ದಾಖಲಿಸಿ ಚೆನ್ನೈ ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು.
ಚೆನ್ನೈ ತಂಡದ ಆರಂಭ ಚೆನ್ನಾಗಿತ್ತು. ಅದು ಮೊದಲ 3 ಓವರ್ಗಳಳ್ಲಿ 21 ರನ್ ಗಳಿಸಿತ್ತು. ನಾಲ್ಕನೆ ಓವರ್ನ ಮೊದಲ ಎಸೆತದಲ್ಲಿ ಆರಂಭಿಕ ದಾಂಡಿಗ ಡ್ವೇಯ್ನಿ ಸ್ಮಿತ್ (17) ಔಟಾದರು. ಶ್ರೀನಿವಾಸ್ ಅರವಿಂದ್ರ ಎಸೆತದಲ್ಲಿ ಸ್ಮಿತ್ ಸ್ಟಾರ್ಕ್ಗೆ ಕ್ಯಾಚ್ ನೀಡಿದರು. ಎರಡನೆ ವಿಕೆಟ್ಗೆ ಮೈಕ್ ಹಸ್ಸಿ ಮತ್ತು ಎಫ್ಡು ಪ್ಲೆಸಿಸ್ ಎರಡನೆ ವಿಕೆಟ್ಗೆ 40 ರನ್ ಸೇರಿಸಿದರು. ಡು ಪ್ಲೆಸಿಸ್(21) ಅವರು ಚಾಹಲ್ ಎಸೆತವನ್ನು ಅನಗತ್ಯವಾಗಿ ಕೆಣಕಲು ಹೋಗಿ ವಿಕೆಟ್ ಕೈ ಚೆಲ್ಲಿದರು. ಸುರೇಶ್ ರೈನಾ (0) ಕ್ರೀಸ್ಗೆ ಆಗಮಿಸಿದರೂ ಅವರಿಂದ ತಂಡದ ಖಾತೆಗೆ 1 ರನ್ ಸೇರಿಸಲು ಸಾಧ್ಯವಾಗಲಿಲ್ಲ. 9.4 ಓವರ್ಗಳಲ್ಲಿ 61ಕ್ಕೆ 3 ವಿಕೆಟ್ ಕಳೆದುಕೊಂಡ ಚೆನ್ನೈ ತಂಡದ ಬ್ಯಾಟಿಂಗ್ನ್ನು ಮುನ್ನೆಡೆಸಲು ಮೈಕ್ ಹಸ್ಸಿಗೆ ನಾಯಕ ಧೋನಿ ಸಾಥ್ ನೀಡಿದರು.
ಧೋನಿ ಮತ್ತು ಹಸ್ಸಿ ನಾಲ್ಕನೆ ವಿಕೆಟ್ಗೆ 6.5 ಓವರ್ಗಳಲ್ಲಿ 47 ರನ್ ಸೇರಿಸಿದರು. ಹಸ್ಸಿ 46 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 56 ರನ್ ಸೇರಿಸಿದರು.
ಐದನೆ ವಿಕೆಟ್ಗೆ ಧೋನಿ ಮತ್ತು ಪವನ್ ನೇಗಿ 2.2 ಓವರ್ಗಳಲ್ಲಿ 27 ರನ್ ಸೇರಿಸಿ ತಂಡವನ್ನು ಒತ್ತಡದಿಂದ ಪಾರು ಮಾಡಿದರು. 18.5ನೆ ಓವರ್ನಲ್ಲಿ ನೇಗಿ(12) ಮತ್ತು 18.6ನೆ ಓವರ್ನಲ್ಲಿ ಡ್ವೇಯ್ನ ಬ್ರಾವೊ (0) ಔಟಾದರು. ಗೆಲ್ಲಲು 1 ರನ್ ಅಗತ್ಯ ಇದ್ದಾಗ ಧೋನಿ (26) ಔಟಾದರು. ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ ಔಟಾಗದೆ 1 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
139/8: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 139 ರನ್ ಸಂಪಾದಿಸಿತ್ತು.
ರಾಂಚಿಯ ಜೆಎಸ್ಸಿಎ ಸ್ಟೇಡಿಯಂಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿ ತಂಡದ ದಾಂಡಿಗರು ಕೆಟ್ಟ ಹೊಡೆತಗಳಿಗೆ ಯತ್ನಿಸಿ ವಿಕೆಟ್ ಕೈ ಚೆಲ್ಲಿದರು.
ಚೆನ್ನೈ ತಂಡದ ಬೌಲರ್ಗಳು ಸಂಘಟಿತ ದಾಳಿ ನಡೆಸಿ ಆರ್ಸಿಬಿಯನ್ನು ಕಡಿಮೆ ರನ್ಗೆ ಕಟ್ಟಿ ಹಾಕಿದರು. ವೇಗಿ ಆಶೀಷ್ ನೆಹ್ರಾ (3-28), ಆರ್.ಅಶ್ವಿನ್, ಮೋಹಿತ್ ಶರ್ಮ, ಸುರೇಶ್ ರೈನಾ, ಡ್ವೇಯ್ನಿ ಬ್ರಾವೊ ಆರ್ಸಿಬಿಯ ದಾಂಡಿಗರಿಗೆ ದೊಡ್ಡ ಮೊತ್ತದ ಸವಾಲನ್ನು ಸೇರಿಸದಂತೆ ಕಡಿವಾಣ ಹಾಕಿದರು.
ಆರಂಭಿಕ ದಾಂಡಿಗ ಕ್ರಿಸ್ ಗೇಲ್ 41 ರನ್(43ಎ, 2ಬೌ,3ಸಿ) ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್. ಆರ್ಸಿಬಿಯ ದಾಂಡಿಗರು ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದರು. ನಾಯಕ ವಿರಾಟ್ ಕೊಹ್ಲಿ ಅವರು ಗೇಲ್ ಜೊತೆ ಇನಿಂಗ್ಸ್ ಆರಂಭಿಸಿ 1 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ ಗುಡುಗಿದರು. ಆದರೆ ಆಶೀಷ್ ನೆಹ್ರಾ ಅವರು ಕೊಹ್ಲಿಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ. ಕೊಹ್ಲಿ 12 ರನ್ ಗಳಿಸಿದರು.
ಎಬಿಡಿವಿಲಿಯರ್ಸ್ (1) ಮಿಂಚಲಿಲ್ಲ. ಆಶೀಷ್ ನೆಹ್ರಾ ಎಲ್ಬಿಡಬ್ಲು ಬಲೆಗೆ ಬೀಳಿಸಿದರು. ಒಂದೇ ಓವರ್ನಲ್ಲಿ ನೆಹ್ರಾ ಅವರು ಆರ್ಸಿಬಿಯ ಎರಡು ವಿಕೆಟ್ ಉರುಳಿಸಿದರು.
ಮನ್ದೀಪ್ ಸಿಂಗ್(4), ಹರ್ಷಲ್ ಪಟೇಲ್(2) ವಿಫಲರಾದರು. ದಿನೇಶ್ ಕಾರ್ತಿಕ್(28) ಈ ಆವೃತ್ತಿಯ ಐಪಿಎಲ್ನಲ್ಲಿ ಗರಿಷ್ಠ ರನ್ ದಾಖಲಿಸಿದರು. ಮುಂಬೈನ ಯುವ ಬ್ಯಾಟ್ಸ್ಮನ್ ಸರ್ಫ್ರಾಜ್ ತಂಡವನ್ನು ಕಷ್ಟದಿಂದ ಪಾರು ಮಾಡುವ ಪ್ರಯತ್ನ ನಡೆಸಿದರು. ಅವರು 21 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 31 ರನ್ ಗಳಿಸಿದರು.
ಡೇವಿಡ್ ವೈಸ್(12) ಎರಡಂಕೆಯ ಕೊಡುಗೆ ನೀಡಿದರು. ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು
20 ಓವರ್ಗಳಲ್ಲಿ 139/8
ಗೇಲ್ ಸಿ ಮತ್ತು ಬಿ ರೈನಾ 41
ವಿರಾಟ್ ಕೊಹ್ಲಿ ಸಿ ಶರ್ಮ ಬಿ ನೆಹ್ರಾ 12
ಎಬಿ ಡಿವಿಲಿಯರ್ಸ್ ಎಲ್ಬಿಡಬ್ಲು ನೆಹ್ರಾ 1
ಮನ್ದೀಪ್ ಸಿ ಹಸ್ಸಿ ಬಿ ಅಶ್ವಿನ್ 4
ಕಾರ್ತಿಕ್ ಸಿ ಶರ್ಮ ಬಿ ನೆಹ್ರಾ 28
ಸರ್ಫ್ರಾಝ್ ಸಿ ನೇಗಿ ಬಿ ಬ್ರಾವೊ 31
ವೈಸ್ ಸಿ ಬ್ರಾವೊ ಬಿ ಮೋಹಿತ್ 12
ಹರ್ಷಲ್ ಪಟೇಲ್ ರನೌಟ್ 2
ಅರವಿಂದ್ ಅಜೇಯ 0 ಸ್ಟಾರ್ಕ್ ಅಜೇಯ 1 ಇತರ 7
ವಿಕೆಟ್ ಪತನ: 1-23, 2-25, 3-36, 4-80, 5-107, 6-125, 7-138, 8-139
ಬೌಲಿಂಗ್ ವಿವರ
ಆಶೀಷ್ ನೆಹ್ರಾ 4-0-28-3
ಅಶ್ವಿನ್ 4-0-13-1
ಮೋಹಿತ್ ಶರ್ಮ 4-0-22-1
ಸುರೇಶ್ ರೈನಾ 3-0-36-1
ಬ್ರಾವೊ 3-0-21-1
ನೇಗಿ 1-0-4-0
ಜಡೇಜ 1-0-13-0
ಚೆನ್ನೈ ಸೂಪರ್ ಕಿಂಗ್ಸ್
19.5 ಓವರ್ಗಳಲ್ಲಿ 140/7
ಸ್ಮಿತ್ ಸಿ ಸ್ಟಾರ್ಕ್ ಬಿ ಅರವಿಂದ್ 17
ಹಸ್ಸಿ ಸಿ ಪಟೇಲ್ ಬಿ ವೈಸ್ 56
ಪ್ಲೆಸಿಸ್ ಬಿ ಚಾಹಲ್ 21
ರೈನಾ ಸಿ ಡೇವಿಡ್ ಬಿ ಚಾಹಲ್ 0
ಧೋನಿ ಸಿ ಕಾರ್ತಿಕ್ ಬಿ ಪಟೇಲ್ 26
ನೇಗಿ ರನೌಟ್ 12
ಜಡೇಜ ಅಜೇಯ 0
ಬ್ರಾವೋ ಬಿ ಸ್ಟಾರ್ಕ್ 0 ಅಶ್ವಿನ್ ಅಜೇಯ 1
ಇತರ 7
ವಿಕೆಟ್ ಪತನ: 1-21, 2-61, 3-61, 4-108, 5-135, 6-135, 7-139
ಬೌಲಿಂಗ್ ವಿವರ :
ಸ್ಟಾರ್ಕ್ 4-0-27-1
ಅರವಿಂದ್ 4-0-25-1
ಹರ್ಷಲ್ ಪಟೇಲ್ 3.5-0-26-1
ಡೇವಿಡ್ ವೈಸ್ 4-0-30-1
ಚಾಹಲ್ 4-0-28-2
