ಉತ್ತಮವಿಲನ್ ಯಶಸ್ಸಿನಲ್ಲಿ ತೇಲಾಡುತ್ತಿರುವ ನಟ ಕಮಲ್ ಹಾಸನ್ ಅವರ ಮುಂದಿನ ಚಿತ್ರಕ್ಕೆ ನೇಪಾಳ ಮೂಲದ ಬೆಡಗಿ ನಟಿ ಮನಿಷಾ ಕೊಯಿರಾಲಾ ಅವರು ಅಭಿನಯಿಸಲಿದ್ದು ತೀವೃ ಕುತೂಹಲ ಮೂಡಿಸಿದೆ.
ಇನ್ನೂ ಹೆಸರಿಡದ ಈ ತ್ರಿಲ್ಲರ್ ಚಿತ್ರದ ಮುಹೂರ್ತ ಮುಂದಿನ ತಿಂಗಳು ನಡೆಯಲಿದ್ದು ಕಮಲ್ ಹಾಸನ್ ಅವರ ಪತ್ನಿಯ ಪಾತ್ರದಲ್ಲಿ ಮನಿಷಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ . ಈಗಾಗಲೇ ಚಿತ್ರತಂಡ ಅವರನ್ನು ಸಂಪರ್ಕಿಸಿದ್ದು ಅವರೂ ಸಹ ಒಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
1996ರಲ್ಲಿ ಶಂಕರ್ ನಿರ್ದೇಶನದ ತಮಿಳಿನ ‘ಇಂಡಿಯನ್’ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಮನಿಷಾ ಇಬ್ಬರೂ ಒಟ್ಟಿಗೆ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದರು . ಹಾಗಾಗಿ ಈ ಚಿತ್ರದಲ್ಲಿಯೂ ಚಿಕ್ಕ ಪಾತ್ರವಾದರೂ ಸಹ ಮನಿಷಾ ಅವರನ್ನೇ ಕರೆತರಬೇಕು ಎಂಬುದು ಚಿತ್ರತಂಡದ ಒತ್ತಾಸೆಯಾಗಿದ್ದು ಒಂದೊಮ್ಮೆ ಮನಿಷಾ ಈ ಪಾತ್ರದಲ್ಲಿ ಅಭಿನಯಿಸಿದರೆ ಮತ್ತೊಮ್ಮೆ ಈ ಜೋಡಿ ಯಶಸ್ಸು ಗಳಿಸುವುದು ನಿಶ್ಚಿತ ಎಂಬ ಮಾತು ಕೇಳಿ ಬರುತ್ತಿದೆ.