ಕರ್ನಾಟಕ

4 ವರ್ಷದ ಮಗುವನ್ನು ಅತ್ಯಾಚಾರ ಮಾಡಿದ 13 ವರ್ಷದ ಬಾಲಕ !

Pinterest LinkedIn Tumblr

1548child rape - Reuters (2)

ಹದಿಮೂರು ವರ್ಷದ ಬಾಲಕನೊಬ್ಬ 4 ವರ್ಷದ ಪುಟ್ಟ ಮಗುವಿನ ಮೇಲೆ ನೆರೆಮನೆಯ ಬಾಲಕ ಅತ್ಯಾಚಾರ ನಡೆಸಿದ ಭಯಾನಕ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಇಲ್ಲಿನ ಆರ್.ಕೆ.ಪುರಮ್‌ನಲ್ಲಿ ವಾಸವಾಗಿರು ಈ ಬಾಲಕ ಮಂಗಳವಾರ ಸಂಜೆ ಸರಕಾರಿ ವಸತಿ ನಿಲಯದ ಹೊರಗೆ ಆಟವಾಡುತ್ತಿದ್ದ ಮಗುವಿಗೆ ಚಾಕಲೇಟು ಕೊಡಿಸುತ್ತೇನೆ ಎಂದು ಪುಸಲಾಯಿಸಿ ಅಜ್ಞಾತ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ .

ಈ ಸಮಯದಲ್ಲಿ ಮಗು ಚೀರಿಕೊಂಡಿದ್ದು  ಈ ಚೀರಾಟ ಕೇಳಿದ ದಾರಿಹೋಕರೊಬ್ಬರು ಆಕೆಯನ್ನು ರಕ್ಷಿಸಿ, ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಮಂಡಳಿಯ ಮುಂದೆ ಹಾಜರು ಪಡಿಸಿ ರಿಮಾಂಡ್ ಹೋಮ್‌ಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment