ಕರ್ನಾಟಕ

ಈ ಮಗುವಿನ ಮೇಲೆ ಬರುತ್ತಂತೆ ‘ಮಾತಾಜೀ’ ದೇವಿ

Pinterest LinkedIn Tumblr

9523mys-childಇದನ್ನು ಭ್ರಮೆ ಅಂತೀರೋ ಅಥವಾ ನಂಬಿಕೆಯ ಪರಾಕಾಷ್ಟೆ ಅಂತೀರೋ ನಿಮಗೆ ಬಿಟ್ಟಿದ್ದು. ಮೂರುವರೆ ತಿಂಗಳ ಪುಟ್ಟ ಕಂದಮ್ಮನ ಮೇಲೆ ದೇವಿಯೊಬ್ಬಳು ಬಂದು ದರ್ಶನ ನೀಡುತ್ತಿದ್ದಾಳೆ.

ಹೌದು. ಮೈಸೂರಿನ ರಮಾಬಾಯಿ ನಗರದಲ್ಲಿ ವಾಸವಾಗಿರುವ ರಾಜಸ್ಥಾನ ಮೂಲದ ರಮೇಶ್ ಎಂಬವರಿಗೆ ಮೂರುವರೆ ತಿಂಗಳ ದೇವಿ ಎಂಬ ಹೆಣ್ಣು ಮಗುವಿದೆ. ಈ ಮಗು ಕಳೆದ ಹದಿನೈದು ದಿನಗಳಿಂದ ಅಚ್ಚರಿಗೆ ಕಾರಣವಾಗಿದ್ದು ಈ ಮಗುವನ್ನು ಆರಾಧಿಸಲು ಜನರ ದಂಡೇ ಹರಿದು ಬರುತ್ತಿದೆ.

ಈ ಮಗುವಿನ ಮೇಲೆ ಕಳೆದ 15 ದಿನಗಳಿಂದ ವಿಚಿತ್ರವಾದ ಬಣ್ಣ ಬರುತ್ತಿದ್ದು  ಇದನ್ನು ನೋಡಿದ ತಂದೆ ರಮೇಶ್, ಮನೆ ಮಾಲೀಕರು ಸೇರಿದಂತೆ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಯಾವಾಗ ಮಗುವಿಗೆ ಸ್ನಾನ ಮಾಡಿಸ್ತಾರೋ ಆ ವೇಳೆಯಲ್ಲಿ ಮಗುವಿನ ಹಣೆಯ ಮೇಲೆ ತಿಲಕ ಪ್ರತ್ಯಕ್ಷವಾಗಿ ತ್ರಿಶೂಲದಂತಹ ನೆರಳು ಕಾಣಿಸಿಕೊಳ್ಳುತ್ತದೆ ಎನ್ನಲಾಗಿದ್ದು ಈ ವಿಷಯ ತಿಳಿದ ರಮಾಬಾಯಿ ನಗರದ ಜನರು ಅಕ್ಕ-ಪಕ್ಕದ ಜೆ.ಪಿ.ನಗರ, ಗೊರೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿಗೆ ಬಂದು ಮಗುವಿನ ಬಳಿ ಆಶೀರ್ವಾದ ಪಡೆದು ಪುನೀತರಾಗುತ್ತಿದ್ದಾರೆ.

ವಿಶೇಷವೆಂದರೆ ರಾಜಸ್ಥಾನದಲ್ಲೇ 20 ದಿನಗಳಿಂದ ಈ ಪವಾಡ ನಡೆಯುತ್ತಿತ್ತು ಎನ್ನಲಾಗಿದ್ದು ಇದೀಗ ಮೈಸೂರಿನಲ್ಲಿಯೂ ಈ ದೇವಿಯ ಪ್ರಭಾವ ಮುಂದುವರೆದಿದ್ದು ಮಗುವಿನ ತಂದೆ ಮತ್ತು ಸಂಬಂಧಿಕರು ಇದು ರಾಜಸ್ಥಾನ ‘ಮಾತಾಜೀ’ ಪವಾಡ ಎನ್ನುತ್ತಿದ್ದಾರೆ.

ಅಲ್ಲದೇ ಮಗುವಿನಿಂದ ಬಂದಿರುವ ಕುಂಕುಮವನ್ನ ಪಡೆದು ತಮ್ಮ ಹಣೆಗಳಿಗೆ ಇಟ್ಟುಕೊಳ್ಳುತ್ತಿರುವ ಜನರು ಮಗು ದೇವಿ ಬಳಿ ಬಂದು ನಮ್ಮ ಕಷ್ಟಗಳನ್ನು ನಿವಾರಿಸು ಅಂತ ಬೇಡಿಕೊಳ್ಳುತ್ತಿದ್ದು ಇದು ದೇವಿಯ ಮಹಿಮೆಯೋ ಅಲ್ಲವೋ ಎಂಬುದು ಮಾತ್ರ ಸದ್ಯಕ್ಕೆ ನಿಗೂಢ.

Write A Comment