ಮನೋರಂಜನೆ

ಡಿಸೆಂಬರ್‌ನಲ್ಲಿ ಭಾರತ-ಪಾಕ್ ಕ್ರಿಕೆಟ್ ಸರಣಿ ಬಹುತೇಕ ಖಚಿತ

Pinterest LinkedIn Tumblr

Ind-Pak

ನವದೆಹಲಿ, ಮೇ 14: ಕ್ರಿಕೆಟ್ ಪ್ರಿಯರಿಗೊಂದು ಸಂತಸದ ಸುದ್ದಿ. ಜಾಗತಿಕ ಕ್ರಿಕೆಟ್‌ನ ಮದಗಜಗಳೆಂದೇ ಗುರುತಿಸಿಕೊಂಡಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಗೆ ಮುಹೂರ್ತ ನಿಗದಿಯಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಏಷ್ಯಾ ಖಂಡದ ಎರಡು ಬದ್ಧ ವೈರಿ ತಂಡಗಳಾಗಿರುವ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಡಿಸೆಂಬರ್‌ನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಎರಡು ರಾಷ್ಟ್ರಗಳ ನಡುವೆ ಟೆಸ್ಟ್ ಪಂದ್ಯ, ಏಕದಿನ ಪಂದ್ಯ ಹಾಗೂ ಟ್ವೆಂಟಿ-20 ಪಂದ್ಯಗಳನ್ನು ನಡೆಸಲು ಬಿಸಿಸಿಐ ಮತ್ತು ಪಿಸಿಬಿ ತೀರ್ಮಾನಿಸಿವೆ.

ಆದರೆ ಕ್ರಿಕೆಟ್ ಸರಣಿಯನ್ನು ಎಲ್ಲಿ ಆಯೋಜಿಸಬೇಕೆಂಬ ಮೂಲ ಪ್ರಶ್ನೆ ಎದುರಾಗಿದೆ. ಭಾರತದಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತದೆಯೇ, ಇಲ್ಲವೇ ಎಂಬ ಆತಂಕ ಅಧಿಕಾರಿಗಳನ್ನು ಕಾಡುತ್ತಿದೆ.

ಮತ್ತೊಂದೆಡೆ ಪಾಕ್‌ನಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಲು ಪಿಸಿಬಿ ಸಮ್ಮತಿಸಿದೆ. ಆದರೆ ಭಾರತೀಯ ಆಟಗಾರರನ್ನು ಅಲ್ಲಿಗೆ ಕಳುಹಿಸಿಕೊಡುವ ಬಗ್ಗೆ ಬಿಸಿಸಿಐ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಏಕೆಂದರೆ ಸದಾ ಉಗ್ರರ ಹಾವಳಿಗೆ ಸಿಲುಕಿ ನಲುಗಿರುವ ಪಾಕ್‌ನಲ್ಲಿ ಭಾರತೀಯ ಆಟಗಾರರ ಸುರಕ್ಷತೆಗೆ ಯಾವುದೇ ಖಾತರಿಯಿಲ್ಲ. ಆದರೆ ಭಾರತಕ್ಕೆ ಬರಲು ಪಾಕ್ ಆಟಗಾರರು ಒಪ್ಪುತ್ತಿಲ್ಲ. ಈ ಕಾರಣದಿಂದ ಕ್ರಿಕೆಟ್ ಸರಣಿಯನ್ನು ಎಲ್ಲಿ ನಡೆಸಬೇಕು ಎಂಬ ಬಗ್ಗೆ ಜಿಜ್ಞಾಸೆ ಎದುರಾಗಿದೆ.

ಮೂಲಗಳ ಪ್ರಕಾರ ಭಾರತ-ಪಾಕ್ ನಡುವಿನ ಕ್ರಿಕೆಟ್ ಸರಣಿಯನ್ನು ಅರಬ್ ಸಂಯುಕ್ತ ರಾಷ್ಟ್ರ (ಯುಎಇ)ದಲ್ಲಿ ನಡೆಸಲು ಬಿಸಿಸಿಐ ಹಾಗೂ ಪಿಸಿಬಿ ತೀರ್ಮಾನಿಸಿದೆ ಎಂದು ಮೂಲಗಳು ಖಚಿತಪಡಿಸಿವೆ. ಈಗಾಗಲೇ ಸರಣಿಯ ಪ್ರಸಾರದ ಹಕ್ಕನ್ನು ಟೆನ್ ಸ್ಪೋರ್ಟ್ಸ್ 150 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಹಾವು-ಮುಂಗುಸಿಯಂತಿರುವ ಭಾರತ-ಪಾಕ್ ನಡುವಿನ ಕ್ರಿಕೆಟ್ ಸರಣಿ ಡಿಸೆಂಬರ್‌ನಲ್ಲಿ ಬಹುತೇಕ ಖಚಿತವಾಗಿದೆ.

Write A Comment