ರಾಷ್ಟ್ರೀಯ

ಅಳಿಯ ಹಾಗೂ ಆತನ ಅಪ್ರಾಪ್ತ ಪ್ರೇಯಸಿಯನ್ನು ಬೆಂಕಿಹಚ್ಚಿ ಕೊಂದ ಮಾವ

Pinterest LinkedIn Tumblr

fire

ಗಯಾ, ಮೇ 14: ವಿವಾಹಿತ ಪ್ರಿಯಕರ ಹಾಗೂ ಆತನ ಅಪ್ರಾಪ್ತೆ ಪ್ರೇಯಸಿಯನ್ನು ನೇಣು ಹಾಕಿ ನಂತರ ಶವಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಬಿಹಾರದ ಅಮೇಥ ಜಿಲ್ಲೆಯಲ್ಲಿ ವರದಿಯಾಗಿದೆ.

ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದ ಪ್ರೇಮಿಗಳನ್ನು ಜಯರಾಮ್ ಮಾಂಜಿ(25) ಹಾಗೂ ಪಾರ್ವತಿದೇವಿ (15) ಎಂದು ಗುರುತಿಸಲಾಗಿದೆ. ವಿವಾಹಿತನಾಗಿದ್ದ ಜಯರಾಮ್ ಅಪ್ರಾಪ್ತೆ ಪಾರ್ವತಿದೇವಿಯ ಮೋಹ ಪಾಶಕ್ಕೆ ಬಿದ್ದಿದ್ದ. ಇವರಿಬ್ಬರ ಸಂಬಂಧ ಜಯರಾಮ್ ಮಾವನ ಮನೆಯವರ ಆಕ್ರೋಶಕ್ಕೆ ಕಾರಣವಾಗಿತ್ತು.

ಇಬ್ಬರೂ ತಮ್ಮ ಸಂಬಂಧ ಕಡಿದುಕೊಳ್ಳುವಂತೆ ಪಂಚಾಯ್ತಿ ಕೂಡ ನಡೆಸಲಾಗಿತ್ತು. ಆದರೆ ಇದರಿಂದ ಜಯರಾಮ್ ಮಾವನ ಮನೆಯವರು ಸಮಾಧಾನಗೊಂಡಿರಲಿಲ್ಲ. ಇಬ್ಬರನ್ನೂ ಮುಗಿಸಲು ಸಂಚು ರೂಪಿಸಿದ್ದ ಸುಮಾರು 15 ಮಂದಿ ಗ್ರಾಮಸ್ಥರು ಸಮಯ ಸಾಧಿಸಿ, ಇಬ್ಬರನ್ನೂ ಅಪಹರಿಸಿ ಮರಕ್ಕೆ ನೇಣು ಬಿಗಿದು ಹತ್ಯೆ ಮಾಡಿ ಶವಗಳನ್ನು ಸುಟ್ಟು ಹಾಕಿದ್ದರು.

ನಿರ್ಜನ ಪ್ರದೇಶದಲ್ಲಿ ಎರಡು ದೇಹಗಳನ್ನು ಸುಟ್ಟು ಹಾಕಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವುಗಳ ಡಿಎನ್‌ಎ ಪರೀಕ್ಷೆಗೊಳಪಡಿಸಿದಾಗ ಮೃತಪಟ್ಟವರು ಜಯರಾಮ್ ಮತ್ತು ಪಾರ್ವತಿದೇವಿ ಎಂಬುದು ಖಚಿತಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನು ಮಹಾರಾಜ್ ತಿಳಿಸಿದ್ದಾರೆ.

Write A Comment