ಮನೋರಂಜನೆ

ನಮ್ಮ ಮದುವೆ ಸದ್ಯಕ್ಕಿಲ್ಲ: ಕತ್ರಿನಾ

Pinterest LinkedIn Tumblr

katri

ಬಾಲಿವುಡ್ ನಲ್ಲಿ ಅತ್ಯಂತ ಆಕರ್ಷಕ ಜೋಡಿಗಳಲ್ಲಿ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಸಹಿತ ಸೇರ್ಪಡೆ ಆಗಿದ್ದಾರೆ. ಅವರಿಬ್ಬರ ಪ್ರೀತಿ,ಪ್ರಣಯ ಹಾಗೂ ಮದುವೆಯ ಬಗ್ಗೆಯೇ ಬಾಲಿವುಡ್ನಲ್ಲಿ ಸದಾ ಚರ್ಚೆ ಆಗುತ್ತಿರುತ್ತದೆ.

ರಣಬೀರ್ ಕಪೂರ್ ಸಧ್ಯದಲ್ಲೇ ಮದುವೆ ಆಗುತ್ತಿದ್ದಾರೆ. ಮೂರುಮಕ್ಕಳ ತಾಯಿತಂದೆ ಆಗ್ತಾ ಎನ್ನುವ ಸುದ್ದಿಗೆ ಹೆಚ್ಚು ಮಹತ್ವ ಸಿಕ್ಕಿದೆ.ಆದರೆ ಈ ಬಗ್ಗೆ ಕತ್ರಿನಾ ಕೈಫ್ ಮಾತ್ರ ಭಿನ್ನ ಅಭಿಪ್ರಾಯ ತೋರಿಸಿದ್ದಾಳೆ. ಆಕೆ ಸಧ್ಯಕ್ಕೆ ತಾವಿಬ್ಬರೂ ಮದುವೆ ಆಗುತ್ತಿಲ್ಲ ಎನ್ನುವ ಸಂಗತಿಯನ್ನು ಹೇಳಿದ್ದಾಳೆ. ಅಂತಹ ಸುದ್ದಿ  ವಾಸ್ತವವಲ್ಲ ಎಂದು ಈ ಸಮಯದಲ್ಲಿ ಆಕೆ ಹೇಳಿದ್ದಾಳೆ.

ಮುಂದಿನ ವರ್ಷ ಕತ್ರಿನಾ ಹಾಗೂ ರಣಬೀರ್ ಮದುವೆ ಆಗ್ತಾರೆ ಎನ್ನುವ ಸುದ್ದಿ ರಾಷ್ಟ್ರದ ಮಾಧ್ಯಮಗಳು ಬಗೆ ಬಗೆಯ ಕಥನಗಳನ್ನು ತಿಳಿಸಿತ್ತು. ಈ ತಿಂಗಳ ಕೊನೆಯಲ್ಲಿ ಅವರ ನಿಶ್ಚಿತಾರ್ಥ ನಡೆಯುತ್ತದೆ ಎನ್ನುವ ಸುದ್ದಿಯನ್ನು ತುಂಬಾ ಅಬ್ಬರವಾಗಿ ಪ್ರಸಾರ ಮಾಡಿದ್ದರು. ಆದರೆ ಈಗ ಕತ್ರಿನಾ ಅಭಿಷೇಕ್ ಬಚ್ಚನ್ ಜೊತೆ ಸೇರಿ ಫಿತೂರ್ ಮತ್ತು ಅನುರಾಗ್  ಬಸು ಅವರ ನಿರ್ದೇಶನದ ಜಗ್ಗಾ ಜಾಸೂಸು ಚಿತ್ರದ ಕೆಲಸಲ್ಲಿ ಬ್ಯುಸಿ. ಅದರ ನಡುವೆ ಆಕೆ ಮೊದಲಬಾರಿಗೆ ಕಾನ್ಸ್ ಅಂತಾರಾಷ್ಟ್ರೀಯ  ಚಲಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾಳೆ. ಅದು ಇದೇ ತಿಂಗಳು ನಡೆಯುವುದು. ಈ ಎಲ್ಲ ಸಂಗತಿಗಳು ಆಕೆಯ  ತಾರ ಬದುಕಿನ ಬ್ಯುಜಿಯನ್ನು ಎತ್ತಿತೋರಿಸಿವೆ. ಹಾಗಿರುವಾಗ ವೈಯಕ್ತಿಕ ಬದುಕಿಗೆಲ್ಲಿದೆ ಬೆಲೆ ?

Write A Comment