ಮನೋರಂಜನೆ

ಹಾಟ್ ಹಾಟ್ ಸನ್ನಿ ಲಿಯೋನ್‌ ಬಗ್ಗೆ ನಿಮಗೆ ಗೊತ್ತಿಲ್ಲದ 25 ರೋಚಕ ರಹಸ್ಯಗಳು…

Pinterest LinkedIn Tumblr

sunn

ಮುಂಬೈ: ಬಾಲಿವುಡ್ ಹಾಟ್ ಹಾಟ್ ನಟಿ ಸನ್ನಿ ಲಿಯೋನ್‌ಗೆ ಇಂದಿಗೆ (ಮೇ 15) 34 ವರ್ಷ ಪೂರ್ಣಗೊಂಡು 35ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಸನ್ನಿ ಬಗ್ಗೆ ನಿಮಗೆ ಗೊತ್ತಿಲ್ಲದ 25 ರೋಚಕ ರಹಸ್ಯಗಳು.

1) ಟೆಲಿವಿಜನ್‌ನಲ್ಲಿ ಬಿಗ್‌ ಬಾಸ್ 5 ಬರುವದಕ್ಕಿಂತ ಮುಂಚೆ ಹಾಟ್ ನಟಿ ಸನ್ನಿ ಲಿಯೋನ್‌ ಪೋರ್ನ್ ಸ್ಟಾರ್ ಎನ್ನುವ ಬಗ್ಗೆ ಬಹಳ ಕಡಿಮೆ ಜನರಿಗೆ ಮಾತ್ರ ಗೊತ್ತಿತ್ತು.  ಬಿಗ್ ಬಾಸ್‌ ಮುಗಿಯುವದಕ್ಕಿಂತ ಮೊದಲೇ ಬಾಲಿವುಡ್‌ನಲ್ಲಿ ಹಾಟ್ ಹಾಟ್ ನಟಿಯಾಗಿ ಖ್ಯಾತಿಪಡೆದಳು.

2)  ಬಿಗ್‌ ಬಾಸ್‌ 5 ನಡೆಯುತ್ತಿದ್ದ ಸಂದರ್ಭದಲ್ಲಿ ಸನ್ನಿ ಲಿಯೋನ್ ಅವರನ್ನು ಭೇಟಿ ಮಾಡಿದ ಖ್ಯಾತ ಬಾಲಿವುಡ್ ನಿರ್ದೇಶಕ ಅಲ್ಲಿಯೇ ಚಿತ್ರಕಥೆಯನ್ನು ತಿಳಿಸಿ ಆಕೆಯ ಒಪ್ಪಿಗೆ ಪಡೆದರು. ಮಹೇಶ್ ಭಟ್ ಮೊದಲಿನಿಂದಲೂ ಸನ್ನಿಯನ್ನು ಹಾಕಿಕೊಂಡು ಚಿತ್ರ ನಿರ್ಮಿಸಬೇಕು ಎನ್ನುವ ಬಯಕೆಯಿತ್ತು. ಕಲ್‌ಯುಗ್ ಚಿತ್ರಕ್ಕೂ ಸನ್ನಿ ಸಹಿ ಪಡೆಯುವ ವಿಫಲ ಪ್ರಯತ್ನ ನಡೆಸಿದ್ದರು.ಸನ್ನಿ ಲಿಯೋನ್ ಮೊದಲ ಚಿತ್ರಕ್ಕೆ ಒಂದು ಮಿಲಿಯನ್ ಡಾಲರ್ ಮೊತ್ತವನ್ನು ಕೇಳಿದ್ದರಂತೆ.

3) 1981ರ ಮೇ 13 ರಂದು ಜನಿಸಿದ ಸನ್ನಿ ಲಿಯೋನ್ ತನ್ನ ಹೆಸರನ್ನು ಕರೇನ್ ಮಲ್ಹೋತ್ರಾ ಎಂದು ಹೇಳುತ್ತಾಳೆ. ಆದರೆ, ಅಸಲಿಗೆ ಪಾಸ್‌‍ಪೋರ್ಟ್‌ನಲ್ಲಿ ಕರೇನ್‌ಜಿತ್ ಕೌರ್ ವೋರಾ ಎಂದಿದೆ. ಪೋರ್ನ್ ಚಿತ್ರಗಳಲ್ಲಿ ನಟಿಸುವ ಆಫರ್ ಬಂದಾಗ ತನ್ನ ಹೆಸರನ್ನು ಸನ್ನಿ ಎಂದು ಬದಲಾಯಿಸಿಕೊಂಡಳು.

4) ಬಾಲಿವುಡ್‌ನಲ್ಲಿ ಖ್ಯಾತನಟನೊಬ್ಬನ ಹೆಸರು ಸನ್ನಿ ಎಂದಿದೆ..ಅದು ಸನ್ನಿ ಡಿಯೋಲ್. ಅವರಿಬ್ಬರ ನಡುವೆ ಒಂದು ಜೋಕ್ ಪ್ರಸಿದ್ಧವಾಗಿದೆ. ಸನ್ನಿ ಲಿಯೋನ್ ಮತ್ತು ಸನ್ನಿ ಡಿಯೋಲ್ ವಿವಾಹವಾದಲ್ಲಿ ಪತಿ ಮತ್ತು ಪತ್ನಿಯ ಹೆಸರು ಸನ್ನಿ ಡಿಯೋಲ್ ಆಗಲಿದೆ.

5) ಸನ್ನಿ ಲಿಯೋನ್ ಕೇವಲ 11 ವರ್ಷದವಳಾಗಿದ್ದಾಗ ಮೊದಲ ಬಾರಿಗೆ ಚಿತ್ರದಲ್ಲಿ ನಟಿಸಿದ್ದಾಳೆ. 16ನೇ ವರ್ಷದವಳಾಗಿದ್ದಾಗ ಬಾಸ್ಕೆಟ್‌ಬಾಲ್ ಆಟಗಾರನೊಂದಿಗೆ ಸೆಕ್ಸ್ ನಡೆಸಿದ್ದಾಳೆ. 18ನೇ ವರ್ಷದವಳಾಗಿದ್ದಾಗ ಬೈಸೆಕ್ಸ್‌ವಲ್ ಬಗ್ಗೆ ಮಾಹಿತಿ ಪಡೆದಿದ್ದಾಳೆ.

6)  ಸನ್ನಿ ಲಿಯೋನ್‌ಗೆ ಬಾಲ್ಯದಲ್ಲಿ ಹಾಕಿ ಆಟವೆಂದರೆ ತುಂಬಾ ಇಷ್ಟವಾಗಿತ್ತು, ಬಾಲಕರೊಂದಿಗೆ ಹಾಕಿ ಆಟಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ಐಸ್ ಸ್ಕೆಟಿಂಗ್‌ನಲ್ಲಿ ತುಂಬಾ ಆಸಕ್ತಿ ಹೊಂದಿದ್ದಳು.

7) ಸನ್ನಿ ಪೊರ್ನ್ ಸ್ಟಾರ್ ಆಗುವ ಮುಂಚೆ ಬೇಕರಿ ಮತ್ತು ಟೆಕ್ಸ್ ಆಂಡ್ ರಿಟೈರ್‌ಮೆಂಟ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಳು.

8) ಸನ್ನಿ ಮಾಡೆಲ್ ವೃತ್ತಿ ಕೈಗೊಳ್ಳುವ ಬಗ್ಗೆ ಆಕೆಯ ಗೆಳೆಯನೊಬ್ಬ ಸಲಹೆ ನೀಡಿದ್ದ. ಒಬ್ಬ ಖ್ಯಾತ ಫೋಟೋಗ್ರಾಫರ್‌ನನ್ನು ಭೇಟಿಯಾಗಿ ಪೆಂಟ್‌ಹೌಸ್ ಮ್ಯಾಗ್‌ಜಿನ್‌‌‌ಗೆ ಪೋಸ್ ನೀಡಿದ ನಂತರ ಆಕೆಗೆ ಅವಕಾಶಗಳ ಮಹಾಪುರವೇ ಹರಿದುಬಂದಿತು.

9)  ಮ್ಯಾಗ್‌ಜಿನ್‌ಗೆ ಸಂಪೂರ್ಣ ಬೆತ್ತಲೆಯಾಗಿ ಪೋಸ್ ನೀಡುವ ವಿಭಾಗದಲ್ಲಿ ಭಾರಿ ಅವಕಾಶಗಳಿವೆ ಎಂದು ಸನ್ನಿಗೆ ಅನಿಸಿತು. ಹಣ ಮತ್ತು ದೇಶ ವಿದೇಶಗಳ ಪ್ರವಾಸದ ಆಸೆಯಿಂದ ಓಕೆ ಅಂದಳು.

10)  ಕಳೆದ 2003 ರಲ್ಲಿ ವಿವಿಧ್ ಎಂಟರ್‌ಟೈನ್‌ಮೆಂಟ್ ಕಂಪೆನಿಯೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡು ಪೋರ್ನೋಗ್ರಾಫಿ ಜಗತ್ತಿಗೆ ಕಾಲಿರಿಸಿದಳು.

11) ಸನ್ನಿಯ ಮೊದಲ ಚಿತ್ರದ ಹೆಸರು “ಸನ್ನಿ” ಯಾಗಿತ್ತು. ಪೋರ್ನ್ ಇಂಡಸ್ಟ್ರೀಗೆ ಕಾಲಿಟ್ಟಕೂಡಲೇ ತಾನು ಲೆಸ್ಬಿಯನ್ ಪಾತ್ರಗಳನ್ನು ಮಾತ್ರ ಮಾಡುವುದಾಗಿ ಘೋಷಿಸಿದ್ದಳು. ಇಂತಹ ಚಿತ್ರಗಳಲ್ಲಿ ನಟಿಸುವ ಮೂಲಕ ಸನ್ನಿ ಖ್ಯಾತಿಯ ಉತ್ತಂಗಕ್ಕೇರಿದಳು.

12) 2007ರಲ್ಲಿ ಸನ್ನಿ ಪುರುಷರೊಂದಿಗೆ ಕ್ಯಾಮರಾ ಮುಂದೆ ಪೋರ್ನ್ ಚಿತ್ರದಲ್ಲಿ ನಟಿಸಲು ಒಪ್ಪಿದಳು. ತನ್ನ ಪ್ರಿಯತಮ ಮ್ಯಾಟ್ ಎರಿಕ್ಸನ್ ‌ನೊಂದಿಗೆ ಹಾಟ್ ಹಾಟ್ ಆಗಿ ಸಂಪೂರ್ಣ ಬೆತ್ತಲೆಯಾಗಿ ನಟಿಸಿದಳು. ಚಿತ್ರದ ಹೆಸರು ಸನ್ನಿ ಲವ್ಸ್ ಮ್ಯಾಟ್ ಎಂದಾಗಿತ್ತು.

13)  ಮ್ಯಾಟ್‌ನೊಂದಿಗಿನ ಲವ್ವಿ ಡವ್ವಿ ಅಂತ್ಯಗೊಂಡಿದ್ದರಿಂದ ಸನ್ನಿ, ಇತರ ಪುರುಷರೊಂದಿಗೆ ಪೋರ್ನ್ ಚಿತ್ರದಲ್ಲಿ ನಟಿಸಲು ಆರಂಭಿಸಿದಳು.

14 ಸನ್ನಿ ತನ್ನ ಜನಪ್ರಿಯತೆಯ ಲಾಭ ಪಡೆಯುವುದರಲ್ಲಿ ಯಶಸ್ವಿಯಾದಳು. ಇಂಟರ್‌ನೆಚ್‌ನಲ್ಲಿ ಚಿತ್ರ ನಿರ್ಮಿಸಿ ಕೈ ತುಂಬಾ ಹಣ ಸಂಪಾದಿಸಿದಳು. ಅನೇಕ ಜನಪ್ರಿಯ ಉತ್ಪನ್ನಗಳಿಗೆ ಮಾಡೆಲ್ ಕೂಡಾ ಆದಳು.

15) ಕಳೆದ 2005ರಲ್ಲಿ ಎಂಟಿವಿ ಇಂಡಿಯಾ ಗಾಗಿ ರೆಡ್ ಕಾರ್ಪೆಟ್ ರಿಪೋರ್ಟರ್ ಆಗಿ ಸನ್ನಿ ಲಿಯೋನ್ ನಟಿಸಿದಳು.

6)  ಭಾರತದ ಜನರು ಆಕೆಯನ್ನು ಸ್ವೀಕರಿಸುವುದಿಲ್ಲ ಎನ್ನುವ ಆತಂಕ ಆಕೆಗೆ ಕಾಡುತ್ತಿತ್ತು. ಆದರೆ, ಭಾರತೀಯರು ತನ್ನ ಸೌಂದರ್ಯದ ಆರಾಧಕರಾಗಿದ್ದಾರೆ ಎಂದು ತಿಳಿದು ಅಚ್ಚರಿಗೊಂಡಿದ್ದಳು.

17 ಸನ್ನಿ ಲಿಯೋನ್ ಅಡಲ್ಟ್ ಚಿತ್ರಗಳನ್ನು ಹೊರತುಪಡಿಸಿ ಕೆಲ ಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಕೂಡಾ ನಟಿಸಿದಳು.

18 ಸನ್ನಿ ಆರೋಗ್ಯದ ಬಗ್ಗೆ ತುಂಬಾ ಜಾಗರೂಕತೆಯನ್ನು ವಹಿಸುತ್ತಾಳೆ. ಪ್ರತಿನಿತ್ಯ ವ್ಯಾಯಾಮ ಮಾಡಿ ದೇಹದ ಸೌಂದರ್ಯ ಕಾಪಾಡಿಕೊಂಡಿದ್ದಾಳೆ. ಹಸಿ ತರಕಾರಿ ಹಣ್ಣುಗಳು ಮತ್ತು ಹಾಲಿನ ಸೇವನೆಯನ್ನು ಮಾಡುತ್ತಾಳೆ.

19) ಸನ್ನಿ ಲಿಯೋನ್ ಬಾಲಿವುಡ್‌ನ ಖ್ಯಾತ ನಟರೊಂದಿಗೆ ನಟಿಸುವ ಇಚ್ಚೆ ಹೊಂದಿದ್ದಾಳೆ.

20) ಬಾಲಿವುಡ್‌ನಲ್ಲಿ ದೀರ್ಘವಾಗಿ ತಳವೂರಲು ಸನ್ನಿ ಹಿಂದಿ ಭಾಷೆ ಮತ್ತು ನೃತ್ಯ ಕೂಡಾ ಕಲಿಯುತ್ತಿದ್ದಾಳೆ.

21) ಸನ್ನಿ ಪೋರ್ನ್ ಚಿತ್ರಗಳಲ್ಲಿ ನಟಿಸುವಂತೆ ಒತ್ತಡವಿರಲಿಲ್ಲ. ನಾನು ನನ್ನ ಇಚ್ಚೆಯಿಂದಲೇ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಳು.

22) ಸನ್ನಿ ಲಿಯೋನ್ ಅಂದಾಜು 35 ಪೋರ್ನ್ ಚಿತ್ರಗಳಲ್ಲಿ ನಟಿಸಿದ್ದಾಳೆ ಮತ್ತು 25 ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾಳೆ.

23 ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬ್ಬರ್ ಪತ್ನಿಯ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

24)  ರಾಗಿಣಿ ಎಂಎಂಎಸ್ 2 ಚಿತ್ರಕ್ಕೆ ಒಪ್ಪಿಗೆ ನೀಡಿದಾಗ ನಿರ್ದೇಶಕಿ ಎಕ್ತಾ ಕಪೂರ್‌ಳನ್ನು ಭೇಟಿಯಾಗಲು ಸನ್ನಿ ಲಿಯೋನ್ ಬುರ್ಖಾ ಧರಿಸಿ ಹೋಗಿದ್ದಳು.

25) ಸನ್ನಿ ಬೈಸೆಕ್ಸ್‌ವಲ್ ಆಗಿದ್ದಾಳೆ. ನಂತರ ಇಲ್ಲಾ ನಾನು ಮೊದಲು ಪುರುಷರಿಗೆ ಆದ್ಯತೆ ನೀಡುತ್ತೇನೆ ಎಂದು ನುಲಿದಿದ್ದಾಳೆ. ವಿರಾಮದ ಸಮಯದಲ್ಲಿ ಪೇಂಟಿಂಗ್, ಹಾರ್ಸ್ ರೈಡಿಂಗ್, ಓದುವುದು ಮಾಡುತ್ತಾಳೆ. ಡಿಸ್ಕವರಿ ಚಾನೆಲ್ ನೋಡುವುದು ಆಕೆಗೆ ತುಂಬಾ ಇಷ್ಟವಂತೆ.

Write A Comment