ಮನೋರಂಜನೆ

ಸಲ್ಮಾನ್ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ನಡೆದ ವಾದವೇನು ಗೊತ್ತಾ …?

Pinterest LinkedIn Tumblr

Salman-Khan-Sister-Arpita-Reaction

ಹಿಟ್ ಅಂಡ್ ರನ್ ಕೇಸ್ ನಲ್ಲಿ ಬೀಸುವ ಡೋನ್ ತಪ್ಪಿಸಿಕೊಂಡಿರುವ ಸಲ್ಮಾನ್ ಖಾನ್ ಪರ ವಕೀಲರು ಪ್ರಾಸಿಕ್ಯೂಸನ್ ನ ಲೋಪಗಳನ್ನು ತಮ್ಮ ವಾದದಲ್ಲಿ ಎತ್ತಿ ತೋರಿಸುವ ಮೂಲಕ ತಮ್ಮ ಕಕ್ಷಿದಾರರಿಗೆ ಜಾಮೀನು ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಂಬೆ ಹೈಕೋರ್ಟ್ ನಲ್ಲಿ ಸಲ್ಮಾನ್ ಪರ ವಾದ ಮಂಡಿಸಿದ ವಕೀಲ ಅಮಿತ್ ದೇಸಾಯಿ ಘಟನೆ ನಡೆದ ದಿನ ಕಾರಿನಲ್ಲಿದ್ದ ಎಲ್ಲರೂ ಪ್ರತ್ಯಕ್ಷದರ್ಶಿಗಳು, ಆದರೆ, ಕೇವಲ ಒಬ್ಬರ ಹೇಳಿಕೆ ಮಾತ್ರ ದಾಖಲಿಸಿಕೊಳ್ಳಲಾದ್ದು ಇನ್ನುಳಿ ದವರ ಹೇಳಿಕೆಯನ್ನು ಕೈ ಬಿಡಲಾಗಿದೆ.ಅಲ್ಲದೇ  ಕಾರಿನಲ್ಲಿದ್ದವರು ನಾಲ್ಕು ಜನ ಆದರೆ ಮೂರು ಜನ ಎಂದು ಪ್ರಕರಣವನ್ನು ದಾರಿ ತಪ್ಪಿಸಲಾಗುತ್ತಿದೆ.ಸಲ್ಮಾನ್ ಖಾನ್, ಕಮಲ್ ಖಾನ್,ಅಶೋಕ್ ಸಿಂಗ್, ರವೀಂದ್ರ ಪಾಟೀಲ್ ಈ ನಾಲ್ಕು ಜನರಿದ್ದರು. ಅಷ್ಟೇ ಅಲ್ಲ ಸಲ್ಮಾನ್ ಈ ಸಮಯದಲ್ಲಿ ಮದ್ಯ ಸೇವನೆ ಮಾಡಿರಲಿಲ್ಲ ಹಾಗೂ ಕಾರನ್ನೂ ಚಲಾಯಿಸುತ್ತಿರಲಿಲ್ಲ ಎಂದು ವಿವರಿಸಿದರು. ಅಲ್ಲದೇ ಕಾರಿನ ಚಕ್ರ ಸ್ಪೋಟಗೊಂಡು ಈ ಘಟನೆ ನಡೆದಿದ್ದು ಇದಕ್ಕೆ ಸಮಬಂಧಿಸಿದ ದಾಖಲೆಯೂ ಇದೆ ಎಂದ ದೇಸಾಯಿ ಕಾರಿನ ಹಿಂಬದಿ ಸೀಟಿನಿಂದ ಸಲ್ಮಾನ್ ಇಳಿದಿದ್ದಾರೆ ಎಂದು ತಿಳಿಸಿದರು.

ಈ ಸಮಯದಲ್ಲಿ ಸರ್ಕಾರಿ ವಕೀಲರೂ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾರಿನಲ್ಲಿದ್ದವರು ಮೂವರು ಮಾತ್ರ , ಮದ್ಯ ಕುಡಿದಿದ್ದ ಸಲ್ಮಾನ್ ಕಾರು ಚಲಾಯಿಸುತ್ತಿದ್ದರು ಎಂಬ ಪ್ರತಿವಾದ ಮಂಡಿಸಿದರು.

ಈ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಅಭಯ್​ ತಿಪ್ಸೆ ಪ್ರಮುಖ ಸಾಕ್ಷಿ ಸಲ್ಮಾನ್​ ಖಾನ್ ಬಾಡಿಗಾರ್ಡ್​ ರವೀಂದ್ರ ಪಾಟೀಲ್ ಹೇಳಿಕೆಯ ವಿವರವನ್ನ ಪರಿಶೀಲನೆ ನಡೆಸಿ ಘಟನೆ ನಡೆದ ಸಂದರ್ಭ ಸಲ್ಮಾನ್ ಜೊತೆಗಿದ್ದ ಸಂಬಂಧಿ ಕಮಲ್​ ಖಾನ್​ ವಿಚಾರಣೆ ನಡೆಸದ ಬಗ್ಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ ಕೇವಲ ಒಬ್ಬರನ್ನು ಮಾತ್ರ ವಿಚಾರಣೆಗೊಳಪಡಿಸಿದ್ದು ಏಕೆ ಎಂದು ಸರ್ಕಾರಿ ವಕೀಲರಿಗೆ ನ್ಯಾ. ಅಭಯ್ ತಿಪ್ಸೆ ಪ್ರಶ್ನೆ ಹಾಕಿದರಲ್ಲದೇ ಸೆಷನ್ಸ್ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಅಮಾನತ್ತು ಮಾಡಿ ಜಾಮೀನು ನೀಡಿದ್ದಾರೆ.

Write A Comment